ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಗರ್ಲ್ ಫ್ರೆಂಡನ್ನು ಗುಟ್ಟಾಗಿ ಸೂಟ್ ಕೇಸ್ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್‌ಗೆ ಬರೋವಾಗ ಸಿಕ್ಕಿಬಿದ್ದಿರೋ ಘಟನೆಯೊಂದು ನಡೆದಿದೆ.
ಸೂಟ್ಕೇಸ್ನಿಂದ ಯುವತಿಯೊಬ್ಬಳು ಆಚೆ ಬರುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಅನ್ನು ಸೂಟ್ ಕೇಸ್ನಲ್ಲಿ ತುಂಬಿಸಿಕೊಂಡು ಕರೆದುಕೊಂಡು ಬಂದಿದ್ದಾನೆ.ಈ ವೇಳೆ ಅನುಮಾನಗೊಂಡ ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದಾರೆ. ಈ ವೇಳೆ ಸೂಟ್ ಕೇಸ್ನಿಂದ ಯುವತಿಯೊಬ್ಬಳು ಹೊರ ಬಂದಿದ್ದಾಳೆ.
ಸೂಟ್‌ಕೇಸ್ ಒಳಗಿದ್ದ ಹುಡುಗಿಯ ಗುರುತು ಇನ್ನೂ ತಿಳಿದಿಲ್ಲ. ಆಕೆಯೂ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಥವಾ ಬೇರೆ ಸಂಸ್ಥೆಯ ವಿದ್ಯಾರ್ಥಿನಿಯೇ ಎಂಬುದು ಖಚಿತವಿಲ್ಲ.