ಶಿವಾಜಿ ಮಹಾರಾಜರ ಆದರ್ಶಗಳ ಮೇಲೆ ಮೋದಿ ಸರ್ಕಾರ ಇದೆ: ಗೃಹ ಸಚಿವ ಅಮಿತ್‌ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಾಜಿ ಮಹಾರಾಜರ 345ನೇ ಪುಣ್ಯತಿಥಿಯಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಯಗಢ ಕೋಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಅವರ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಮರಾಠರ ವಿರುದ್ಧ ಹೋರಾಡಿದ ಔರಂಗಜೇಬ್‌ ಸೋತ ವ್ಯಕ್ತಿಯಾದರೆ, ಮೊಘಲರ ಆಡಳಿತ ಮಣಿಸಿದ ಶ್ರೇಯಸ್ಸು ಶಿವಾಜಿಗೆ ಸಲ್ಲಬೇಕು. ಮಹಾರಾಷ್ಟ್ರದಲ್ಲಿ ಮರಾಠರ ವಿರುದ್ಧ ಹೋರಾಡಿದ ಮೊಘಲ್‌ ದೊರೆ ಔರಂಗಜೇಬ್‌, ಒಬ್ಬ ಸೋತ ವ್ಯಕ್ತಿಯಾಗಿ ಮರಣ ಹೊಂದಿದ್ದಾನೆ. ಆತನ ಸಮಾಧಿ ಕೂಡ ಇದೇ ನೆಲದಲ್ಲಿದೆ ಎಂದರು.

ಶಿವಾಜಿ ಮಹಾರಾಜರ ಆದರ್ಶಗಳು ಸ್ವಾತಂತ್ರ್ಯದ 100ನೇ ವರ್ಷದ ವೇಳೆಗೆ ಭಾರತವು ‘ಸೂಪರ್ ಪವರ್’ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಪ್ರೇರೇಪಿಸುತ್ತದೆ. ನರೇಂದ್ರ ಮೋದಿ ಸರ್ಕಾರವು ಶಿವಾಜಿ ಕೊಟ್ಟಿರುವ ಇದೇ ಆದರ್ಶಗಳ ಮೇಲೆ ಕೆಲಸ ಮಾಡುತ್ತದೆ ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!