ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರು ದುರಾಸೆಗೆ ಒಳಗಾಗಿ ಅಥವಾ ಭಯದಿಂದ ಧರ್ಮವನ್ನು ಎಂದಿಗೂ ಬಿಡಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಂದು ನಮ್ಮನ್ನು ಮತಾಂತರಿಸಬೇಕೆಂದು ಬಯಸುವ ಶಕ್ತಿಗಳಿವೆ. ಅದಕ್ಕಾಗಿ ದೈನಂದಿನ ಜೀವನದಲ್ಲಿ ದುರಾಸೆ ಹುಟ್ಟಿಸುವ, ಪ್ರಲೋಭನೆ ತೋರುವ ಮತ್ತು ಆಮಿಷವೊಡ್ಡುವ ಘಟನೆಗಳು ನಡೆಯುತ್ತಿರುತ್ತವೆ. ಹಾಗಾಗಿ, ಇಂದು ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಧಾರ್ಮಿಕ ಕೇಂದ್ರಗಳನ್ನು ಬಲಪಡಿಸುವುದು ನಮ್ಮ ಕೆಲಸ. ಹಾಗೆ ಮಾಡುವುದು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದಂತೆ. ಇದು ಇಡೀ ಮಾನವೀಯತೆಯ ಕಲ್ಯಾಣವನ್ನೂ ಖಾತ್ರಿಪಡಿಸುತ್ತದೆ ಎಂದರು.