ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಗೆ ಹೈದರಾಬಾದ್ ಬೌಲರ್ ಗಳು ಪರದಾಡಿದ್ದು, ಗೆಲುವಿಗೆ 246 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ (82) ಅರ್ಧಶತಕ ಸಿಡಿಸಿದರೆ, ಪ್ರಭಸಿಮ್ರಾನ್ ಸಿಂಗ್ (42), ಪ್ರಿಯಾಂಶ್ ಆರ್ಯ (36) ಹಾಗೂ ಸ್ಟೋಯ್ನಿಸ್ (34) ತಂಡಕ್ಕೆ ಆಸರೆಯಾದರು.
ಪ್ರಿಯಾಂಶ್ ಆರ್ಯ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 36 ರನ್ ಗಳಿಸಿ ಔಟಾದರೆ, ಪ್ರಭಸಿಮ್ರನ್ ಸಿಂಗ್ 23 ಎಸೆತಗಳಲ್ಲಿ ಬೌಂಡರಿ, 1 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು.
ಬಳಿಕ ಒಂದೆಡೆ ಅಯ್ಯರ್ ಅಬ್ಬರಿಸುತ್ತದ್ದರೆ, ಮತ್ತೊಂದು ಕಡೆ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ನೆಹಾಲ್ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 27, ಶಶಾಂಕ್ ಸಿಂಗ್ 3 ಎಸೆತಗಳಲ್ಲಿ 2, ಮ್ಯಾಕ್ಸ್ವೆಲ್ 7 ಎಸೆತಗಳಲ್ಲಿ 3 ರನ್ಗಳಿಸಿ ಔಟ್ ಆದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೋಯ್ನಿಸ್ ಕೇವಲ 11 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 34 ರನ್ಗಳಿಸಿ ತಂಡದ ಮೊತ್ತವನ್ನ 245ಕ್ಕೆ ಕೊಂಡೊಯ್ದರು.