ಹೊಸದಿಗಂತ ಡಿಜಿಟಲ್ ಡೆಸ್ಕ್:
30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ಸರ್ಕಾರದ ನಿಯಮಾನುಸಾರ ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ, ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಟ್ರಂಪ್ ಆಡಳಿತದ ಅಧೀನದಲ್ಲಿರುವ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.
‘ಈಗಲೇ ದೇಶಬಿಟ್ಟು ಬಿಟ್ಟು ಸ್ವಯಂ ಗಡೀಪಾರಾಗಿ’ಎಂದು ಇಲಾಖೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಈ ನಿರ್ಧಾರವು ಎಚ್-1 ಬಿ ಅಥವಾ ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಆದರೆ, ವಿದೇಶಿ ಪ್ರಜೆಗಳು ಸರಿಯಾದ ಅನುಮತಿಯಿಲ್ಲದೆ ಅಮೆರಿಕದಲ್ಲಿ ಉಳಿದಿದ್ದರೆ ಅಂಥವರ ವಿರುದ್ಧ ಈ ಕಾನೂನು ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ತಿಳಿಸಿದೆ.
ಸ್ವಯಂ ಗಡೀಪಾರು ಸುರಕ್ಷಿತವಾಗಿದೆ. ನೀವು ಅಪರಾಧಿಯಲ್ಲದ ಅಕ್ರಮ ವಿದೇಶಿಯಾಗಿ ಸ್ವಯಂ-ಗಡೀಪಾರಾದರೆ ಅಮೆರಿಕದಲ್ಲಿ ಗಳಿಸಿದ ಹಣ ಉಳಿಯುತ್ತದೆ. ಹಾಗೂ ಸ್ವಯಂ ಗಡೀಪಾರು ಆಗುವವರಿಗೆ ಭವಿಷ್ಯದಲ್ಲಿ ಕಾನೂನುಬದ್ಧ ವಲಸೆಗೆ ಅವಕಾಶವಿರುತ್ತದೆ. ಅಂತಹವರಿಗೆ ರಿಯಾಯಿತಿ ದರದಲ್ಲಿ ವಿಮಾನದ ಟಿಕೆಟ್ ಸಹ ಸಿಗಲಿದೆ ಹೋಮ್ಲ್ಯಾಂಡ್ ಹೇಳಿದೆ.