ಕಡು ಬಡತನದಿಂದ ಮುಕ್ತಿ ಪಡೆದ ಧರ್ಮದಾಮ್‌ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮದಾಮ್‌ ಕೇರಳ ರಾಜ್ಯದ ಕಡು ಬಡತನದಿಂದ ಮುಕ್ತಿ ಪಡೆದ ಮೊದಲ ಕ್ಷೇತ್ರವೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಿಣರಾಯಿ ವಿಜಯನ್‌, ಕೇರಳವು ಈಗಾಗಲೇ ಭಾರತದಲ್ಲಿ ಅತ್ಯಂತ ಕಡಿಮೆ ಬಡತನದ ಪ್ರಮಾಣವನ್ನು ಹೊಂದಿದೆ. ಸರ್ಕಾರವು ಈಗ ಕಡು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೆಲಸ ಮಾಡುತ್ತಿದೆ.

ನಮ್ಮ ಜನಸಂಖ್ಯೆಯ 1 ಪ್ರತಿಶತಕ್ಕೂ ಕಡಿಮೆ ಜನರು ಕಡು ಬಡತನದಲ್ಲಿದ್ದಾರೆ. ಆದ್ದರಿಂದ ನ.1ರ ಹೊತ್ತಿಗೆ ಸಂಪೂರ್ಣ ರಾಜ್ಯ ಕಡುಬಡತದಿಂದ ಮುಕ್ತವಾಗಿದೆ ಎಂದು ಘೋಷಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಇದು ನಮ್ಮ ಸಮಗ್ರ ಅಭಿವೃದ್ಧಿಯ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ಬರೆದುಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!