ಬಂಗಾಳದಲ್ಲಿ ‘ವಕ್ಫ್’ ಹೆಸರಲ್ಲಿ ಹಿಂಸಾಚಾರ: ದೀದಿ ಸರಕಾರದ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ವಕ್ಪ್‌ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಕ್ಫ್‌ ಕಾಯ್ದೆ ಜಾರಿಗೆ ಬಂದ ಬಳಿಕ ‘ಹಿಂಸಾಚಾರಕ್ಕೆ ಪ್ರಚೋದಿಸಲಾಗುತ್ತಿದೆ’. ‘ಮೂವರ ಹಿಂದುಗಳನ್ನು ಮನೆಯಿಂದ ಹೊರಗೆಳೆದು ತಂದು ಹತ್ಯೆ ಮಾಡಲಾಗಿದೆ. ಯಾರು ಅವರೆಲ್ಲಾ? ವಕ್ಫ್‌ ಹೆಸರಿನಲ್ಲಿನ ಭೂಮಿಯಿಂದ ಯಾರು ಹೆಚ್ಚಿನ ಲಾಭ ಪಡೆಯಬೇಕಾಗಿತ್ತೋ ಅದೇ ಬಡ ಮತ್ತು ವಂಚಿತ ದಲಿತ ಸಮುದಾಯದವರು.

ವಕ್ಫ್‌ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದು ಕ್ರಮ ತೆಗೆದುಕೊಳ್ಳುವವರೆಗೂ ವಕ್ಫ್‌ ಹೆಸರಿನಲ್ಲಿ ಲಕ್ಷಗಟ್ಟಲೆ ಎಕರೆ ಜಮೀನನ್ನು ಆಕ್ರಮಿಸಿಕೊಂಡವರ ಬಳಿ ಯಾವುದೇ ದಾಖಲೆ ಪತ್ರ, ಆದಾಯ ಪತ್ರಗಳಿರಲಿಲ್ಲ. ಹೀಗಾಗಿ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಯೋಗಿ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!