ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಳಿ ಕಟ್ಟಿದ ಗಂಡನನ್ನೇ ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಕೊಂದಿದ್ದ ಮಹಿಳೆ ಇದೀಗ ಜೈಲಿನ ಕಂಬಿ ಎಣಿಸುತ್ತಿರುವ ನಡುವೆ 50 ದಿನದ ಗರ್ಭಿಣಿ ಎಂದು ಸುದ್ದಿಯಾಗಿದ್ದಾಳೆ.
ಮೀರತ್ ಪೊಲೀಸ್ ಸಿಬ್ಬಂದಿ ಆರೋಪಿ ಮುಸ್ಕಾಳನನ್ನು ಏಪ್ರಿಲ್ 11 ರಂದು ಅಲ್ಟ್ರಾಸೌಂಡ್ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಮುಸ್ಕಾನ್ ಆರು ವಾರಗಳ ಗರ್ಭಿಣಿ ಅನ್ನೋದು ತಿಳಿದಿದೆ. ಅಂದಿನಿಂದ ಮುಸ್ಕಾನ್ ಗೆ ಬಂಧಿಖಾನೆಯಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ.
ಇತ್ತ ಮೃತ ಸೌರಭ್ ರಜಪುತ್ ಅವರ ಕುಟುಂಬಸ್ಥರು ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಮಾರ್ಚ್ 4 ರಂದು ತನ್ನ ಪ್ರಿಯಕರ ಸಾಹಿಲ್ ಜೊತೆ ಪತಿಯನ್ನು ಕೊಂದು ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್ನಲ್ಲಿರಿಸಿದ್ದರು. ಬಳಿಕ ಅದರ ಮೇಲೆ ಸಿಮೆಂಟ್ ಹಾಕಿ ಮುಚ್ಚಿ ಇಬ್ಬರು ಬೇರೆಡೆಗೆ ತೆರಳಿದ್ದರು. ಮಾರ್ಚ್ 18 ರಂದು ಪೊಲೀಸರ ಗಮನಕ್ಕೆ ಈ ವಿಚಾರ ತಿಳಿದಿತ್ತು. ಮಾರ್ಚ್ 19 ರಂದು ಮುಸ್ಕಾನ್ ಮತ್ತು ಸಾಹಿಲ್ ನನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಜೈಲಿನ ಕಂಬಿ ಎಣಿಸುತ್ತಿರುವ ನಡುವೆ 50 ದಿನದ ಗರ್ಭಿಣಿ ಎಂಬ ಸುದ್ದಿ ಕೇಳಿ ಕೊಲೆಗೀಡಾದ ಸೌರಭ್ ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಈ ಕುರಿತು ಕೊಲೆಗೀಡಾದ ಸೌರಭ್ ಅವರ ಸಹೋದರ ರಾಹುಲ್ ರಜಪುತ್ ಪ್ರತಿಕ್ರಿಯಿಸಿದ್ದು, ತಮ್ಮ ಮಾಜಿ ಅತ್ತಿಗೆ ಗರ್ಭಿಣಿಯಾಗಿದ್ದು, ಡಿಎನ್ಎ ಪರೀಕ್ಷೆ ಮೂಲಕ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ತಂದೆ ಯಾರು ಅನ್ನೋದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ. ಆ ಮಗು ಕೊಲೆ ಆರೋಪಿ ಸಾಹಿಲ್ ನದ್ದು ಎಂದಾದರೆ ಅದಕ್ಕು ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.