ದಿನಭವಿಷ್ಯ: ವ್ಯವಹಾರ ಅಂದಮೇಲೆ ತಾಳ್ಮೆ ಇರಲೇಬೇಕಲ್ವಾ? ಸ್ವಲ್ಪ ನಿಧಾನಿಸಿ, ಆತುರ ಬೇಡ

ಮೇಷ
ಕೆಲಸದಲ್ಲಿ ನಿಮ್ಮ ನಿಷ್ಠೆ ಯಶಸ್ಸು ತರುವುದು. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದತೆ ಕಾಪಾಡಲು ಆದ್ಯತೆ ಕೊಡಿ.

ವೃಷಭ
ವ್ಯವಹಾರದಲ್ಲಿ  ಆತುರದ ಕ್ರಮ ಬೇಡ. ಅದರಿಂದ ನಿಮಗೇ ಹಾನಿ.  ಕುಟುಂಬಸ್ಥರ ಭಾವನೆ ಗೌರವಿಸಿ.  ಹೊಂದಾಣಿಕೆಯೆ ಒಳಿತು.

ಮಿಥುನ
ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ. ಅದನ್ನು ಸಮಾಧಾನದಿಂದ ನಿವಾರಿಸಿಕೊಳ್ಳಿ.  ಖರ್ಚು ಅಽಕ.  ಖರೀದಿ ಉತ್ಸಾಹ ಕಡಿಮೆ ಮಾಡಿ.

ಕಟಕ
ಕೆಲವು ವಿಚಾರ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ಹಿರಿಯರ ಸಲಹೆಗಳಿಗೆ ಅಸಮಾಧಾನ ಬೇಡ. ಅದನ್ನು ಪಾಲಿಸಿ.

ಸಿಂಹ
ಕೆಲಸದ ಒತ್ತಡದ ಮಧ್ಯೆಯೂ ಕುಟುಂಬ ಸದಸ್ಯರ ಜತೆ  ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ.

ಕನ್ಯಾ
ಆಸ್ಪತ್ರೆ ಭೇಟಿ, ಇನ್ನಿತರ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಶಾಂತಿ, ಸಮಾಧಾನ ಮೂಡಲಿದೆ.

ತುಲಾ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಉದ್ಯೋಗದ ಒತ್ತಡ ಬದಿಗಿಟ್ಟು ಅವರೊಂದಿಗೆ ಸಂವಹನ ಸಾಽಸಿ. ಧನಾಗಮ, ಖರೀದಿ.

ವೃಶ್ಚಿಕ
ಮನೆಯಲ್ಲಿ  ಭಿನ್ನಾಭಿಪ್ರಾಯ ಉಂಟಾದೀತು. ಯಾರ ಮೇಲೂ ವೃಥಾ ಆರೋಪ ಹೊರಿಸದಿರಿ. ಎಲ್ಲವನ್ನು ಪರಾಮರ್ಶಿಸಿ ನಿರ್ಧರಿಸಿ.

ಧನು
ಯಾವುದೋ ಕೊರಗು. ಹತಾಶೆ. ಅಸಹನೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣ. ಸಹನೆಯಿಂದ ನಿಭಾಯಿಸಿ.

ಮಕರ
ಯಶಸ್ವೀ ದಿನ. ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ತೊಡಕಿನಲ್ಲಿ  ಸಿಲುಕಿಕೊಂಡಿದ್ದರೆ ಇಂದು ನಿರಾಳತೆ ಸಿಗುವುದು. ಧನಪ್ರಾಪ್ತಿ.

ಕುಂಭ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮ ದಾರಿಯೇ ಸರಿ ಎಂಬ ಕಠಿಣ ಧೋರಣೆ ತರವಲ್ಲ. ಆರ್ಥಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.

ಮೀನ
ಭವಿಷ್ಯದ ಕುರಿತಂತೆ ಅನಿಶ್ಚಿತತೆ. ಅದರಿಂದ ಮನಸ್ಸಿಗೆ ವ್ಯಾಕುಲ.  ನಿಜವಾಗಿ ಆತಂಕ ಅನವಶ್ಯ. ನಿಮಗೆ ಪೂರಕ ವಾತಾವರಣವಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!