ಹೊಸದಿಗಂತ ವರದಿ ಹುಬ್ಬಳ್ಳಿ:
ಐದು ವರ್ಷದ ಮೃತ ಬಾಲಕಿಯ ಅಂತಿಮ ಸಂಸ್ಕಾರ ಕುರುಬ ಸಮಾಜದ ಸಂಪ್ರದಾಯದಂತೆ ದೇವಾಂಗಪೇಟೆ ಸ್ಮಶಾನದಲ್ಲಿ ನಡೆಯಿತು.
ಬಾಲಕಿಯ ಕುಟುಂಬಸ್ಥರು ಮೃತ ದೇಹಕ್ಕೆ ಪೂಜೆ ಸಲ್ಲಿಸಿದರು. ಕೊನೆಯ ಬಾರಿ ಬಾಲಕಿ ತಂದೆ ಪೂಜೆ ನೆರವೇರಿಸಿ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬಸ್ಥರು, ಸಂಬಂಧಿಕರು ಸೇರಿ ನೂರಾರು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ಕೆಎಂಸಿಆರ್ ಐ ಆಸ್ಪತ್ರೆ ಯಿಂದ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಆ್ಯಂಬ್ಯೂಲೆನ್ಸ್ ನಲ್ಲಿ ಮೃತದೇಹ ಸಾಗಿಸಲಾಯಿತು. ವಾಹನಕ್ಕೆ ಬಾಲಕಿಯ ಭಾವಚಿತ್ರ ಅಳವಡಿಸಲಾಗಿತ್ತು. ಬಳಿಕ ಬಾಲಕಿಯ ಮೃತ ದೇಹವನ್ನು ನೇರವಾಗಿ ಅಶೋಕನಗರದ ಬಾಲಕಿಯ ನಿವಾಸಕ್ಕೆ ತೆಗೆದುಕೊಂಡು ಹೋಗಲಾಯಿತು. ಮನೆಯ ಮುಂದೆ ಕುಟುಂಬಸ್ಥರ ಪೂಜೆ ನೇರವೇರಿಸಿದರು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ದೇವಾಂಗಪೇಟ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದರು. ನೂರಾರು ಜನರ ಅಂತ್ಯ ಸಂಸ್ಕಾರ ದಲ್ಲಿ ಭಾಗವಹಿಸಿದ್ದರು.