ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೈರೆಕ್ಟರ್ ಬುಚ್ಚಿ ಬಾಬು ಡೈರೆಕ್ಷನ್ ಮಾಡಿರೋ ನಟ ರಾಮ್ ಚರಣ್ ನಟಿಸಿರೋ ‘ಪೆದ್ದಿ’ ಚಿತ್ರದ ಒಂದು ಟೀಸರ್ ಹೊರ ಬಂದಿದೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಕೂಡ ಅಭಿನಯಿಸಿದ್ದು ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.
ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಹೇಗಿದೆ ಅನ್ನುವ ಪ್ರಶ್ನೆಗೆ ಉತ್ತರವನ್ನ ಸ್ವತಃ ಶಿವರಾಜ್ ಕುಮಾರ್ ಕೊಟ್ಟಿದ್ದಾರೆ.
ಪೆದ್ದಿ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರವನ್ನ ಮಾಡಿದ್ದೇನೆ. ಎರಡು ದಿನ ಚಿತ್ರೀಕರಣ ಮಾಡಿದ್ದೇನೆ. ಮುಂದಿನ ಜುಲೈಯಲ್ಲಿ ಈ ಚಿತ್ರದ ಶೂಟಿಂಗ್ ಇದೆ. ಸಿನಿಮಾದ ಈ ಪಾತ್ರದ ವಿಚಾರಕ್ಕೆ ಬಂದ್ರೆ, ಇದು ಎಲ್ಲರಿಗೂ ಕನೆಕ್ಟ್ ಆಗುವ ಪಾತ್ರವೇ ಆಗಿದೆ. ಕೇವಲ ಟಾಲಿವುಡ್‌ನಲ್ಲಿ ಅಲ್ಲ. ಕನ್ನಡಿಗರೂ ಈ ಒಂದು ಪಾತ್ರಕ್ಕೆ ಕನೆಕ್ಟ್ ಆಗುತ್ತಾರೆ ಎಂದಿದ್ದಾರೆ.