ಹೊಸದಿಗಂತ ಡಿಜಿಟಲ್ ಡೆಸ್ಕ್:
ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ನೀಡಲಾದ ಮೀಸಲಾತಿಯು ಅವರಿಗೆ ಒಳ್ಳೆಯ ದಿನಗಳಿಗಿಂತ, ಕಟ್ಟ ದಿನಗಳಿಗೆ ಕಾರಣವಾಗಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೇಶದಲ್ಲಿ ದಲಿತ– ಬಹುಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯು ಕಾಂಗ್ರೆಸ್ ಆಡಳಿತದಂತೆಯೇ ಬಿಜೆಪಿ ಆಡಳಿತದಲ್ಲೂ ಶೋಚನೀಯವಾಗಿದೆ ಎಂದಿದ್ದಾರೆ.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಜನರು ನಿಜವಾದ ಅರ್ಥದಲ್ಲಿ ಮಿಷನರಿ ಅಂಬೇಡ್ಕರ್‌ವಾದಿಗಳಾಗಬೇಕಾಗುತ್ತದೆ. ಪರಸ್ಪರ ಒಗ್ಗಟ್ಟು ಮತ್ತು ರಾಜಕೀಯ ಸಕ್ರಿಯವಾದರೆ ಮಾತ್ರವೇ ದಬ್ಬಾಳಿಕೆ ಮತ್ತು ಅನ್ಯಾಯ ಇತ್ಯಾದಿಗಳಿಂದ ಸ್ವಾತಂತ್ರ್ಯವನ್ನು ಪಡೆಯಬಹುದು.
ಅಭಿವೃದ್ಧಿ ಹೊಂದುವ ಭಾರತದ ಕನಸನ್ನು ನನಸು ಮಾಡಲು ಜಾತಿವಾದ ಮತ್ತು ಸಂಕುಚಿತ ಸ್ವಾರ್ಥ ರಾಜಕೀಯವನ್ನು ತ್ಯಜಿಸಿಬೇಕು ಎಂದು ಮಾಯಾವತಿ ಎಲ್ಲಾ ಸರ್ಕಾರಗಳಿಗೆ ಕಿವಿಮಾತು ಹೇಳಿದ್ದಾರೆ.