ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ದಾಳಿ ಮಾಸ್ಟರ್‌ಮೈಂಡ್ ತಹವ್ವುರ್ ರಾಣಾನನ್ನು ಎನ್‌ಐಎ ಪ್ರತಿದಿನ 8 ರಿಂದ 10 ಗಂಟೆ ವಿಚಾರಣೆ ಮಾಡುತ್ತಿದ್ದಾರೆ.
2008ರಲ್ಲಿ ನಡೆದ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಪೂರ್ಣ ಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಣಾಗೆ ಪ್ರತಿದಿನ ಎನ್ಐಎ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ. ಅಮೆರಿಕದಿಂದ ಗಡೀಪಾರಾಗಿ ಬಂದ ರಾಣಾನನ್ನು ಶುಕ್ರವಾರ ದೆಹಲಿ ನ್ಯಾಯಾಲಯ ವಿಚಾರಣೆಗಾಗಿ 18 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿತ್ತು.
ಜೈಲಿನಲ್ಲಿ ರಾಣಾಗೆ ಪೆನ್, ಕಾಗದ ಮತ್ತು ಕುರಾನ್ ಅನ್ನು ಒದಗಿಸಲಾಗಿದೆ. ಆತ ಯಾವುದೇ ನಿಗದಿತ ಆಹಾರಕ್ಕೆ ಬೇಡಿಕೆಯಿಟ್ಟಿಲ್ಲ. ಇತರ ಕೈದಿಗಳಿಗೆ ನೀಡುವ ಆಹಾರವನ್ನೇ ರಾಣಾಗೂ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.