ಹೊಸದಿಗಂತ ವರದಿ ಯಾದಗಿರಿ:
ವಿದ್ಯುತ್ ತಂತಿ ಏಕಾಏಕಿ ಹರಿದು ಯುವನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎಪಿಎಂಸಿ ಯಾರ್ಡ್ ಹಿಂದುಗಡೆ ಮಂಗಳವಾರ ನಡೆದಿದೆ.
ಖಾಜಾ ಪಟೇಲ್ಬ(20) ಮೃತಪಟ್ಟ ದುರ್ದೈವಿ ಯುವಕ. ವಡಿಗೇರಾ ತಾಲೂಕಿನ ಬಬಲಾದ ಗ್ರಾಮದನಿವಾಸಿಯಾಗಿದ್ದು, ತನ್ನ ಸಹೋದರಿಯನ್ನು ಕಾಣಲು ಮನೆಗೆ ತೆರಳುವ ವೇಳೆ ವಿದ್ಯುತ್ ತಂತಿ ಮೈಮೇಲೆ ಬಿದ್ದಿದೆ. ಹೈವೋಲ್ಟೇಜ್ ನ ಪವರ್ ವೈರ್ ಇದ್ದ ಕಾರಣ ಯುವನ ಬೆನ್ನೊಳಗೆ ಹೊಕ್ಕಿದ್ದು ಹೃದಯ ವಿದ್ರಾಯಕವಾಗಿದೆ.
ಜೆಸ್ಕಾಂ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.