ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಕೆಲವೇ ವರ್ಷದಲ್ಲಿ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುತ್ತದೆ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಆದರೆ, ಕೊಲಂಬಿಯಾ ಯೂನಿವರ್ಸಿಟಿ ಪ್ರೊಫೆಸರ್ ಜೆಫ್ರಿ ಸ್ಯಾಚ್ಸ್ ಅವರು ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಆರ್ಥಿಕತೆಯ ವಿಚಾರದಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಲಿದೆ ಎಂದು ಭವಿಷ್ಯ ನುಡಿದ್ದಿದ್ದಾರೆ.
ಖಾಸಗಿ ಭಾರತೀಯ ವಾಹಿನಿಯೊಂದರಲ್ಲಿ ನಡೆಸಲಾದ ‘ರೈಸಿಂಗ್ ಭಾರತ್’ ಸಮಿಟ್ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಮೆರಿಕವನ್ನು ಭಾರತ ಓವರ್ಟೇಕ್ ಮಾಡುವ ಸಾಧ್ಯತೆಯನ್ನು ತಿಳಿಸಿದ್ದಾರೆ. 10-15 ವರ್ಷದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ದೇಶವಾಗಲಿದೆ ಎಂದು ಜೆಫ್ರಿ ಸ್ಯಾಚ್ಸ್ ಹೇಳಿದ್ದಾರೆ.