ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದಲ್ಲಿ ಚಾಕೊಲೇಟ್ ಮತ್ತು ಕಾಫಿ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ 43 ಕೋಟಿ ರೂ. ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಇದು ರಾಜ್ಯ ಪೊಲೀಸರ ಇತಿಹಾಸದಲ್ಲಿಯೇ ಅತಿ ದೊಡ್ಡ ಮಾದಕವಸ್ತು ವಶವಾಗಿದ್ದು, ವಾಸ್ಕೋಡಗಾಮಾ ನಿವಾಸಿ ನಿಬು ವಿನ್ಸೆಂಟ್ ಹಾಗೂ ಓರ್ವ ಮಹಿಳೆ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕೊಲೇಟ್ ಮತ್ತು ಕಾಫಿ ಪ್ಯಾಕೆಟ್‌ಗಳಲ್ಲಿ ಮಾದಕ ದ್ರವ್ಯಗಳನ್ನು ತುಂಬಿಸಲಾಗಿತ್ತು. ಬಂಧಿತ ಮಹಿಳೆ ನಿಬು ವಿನ್ಸೆಂಟ್ ಸಹಾಯದಿಂದ ಮಾರಾಟ ಮಾಡಲು ಪ್ಯಾಕೆಟ್‌ಗಳನ್ನು ಖರೀದಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಮಹಿಳೆ ಇತ್ತೀಚೆಗೆ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ್ದರಿಂದ, ಅಂತಾರಾಷ್ಟ್ರೀಯ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.