ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೋನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ವಿಶ್ವದ ಷೇರುಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ನಷ್ಟ ಸಂಭವಿಸಿತ್ತು. ಈ ಹೊಡೆತದಿಂದ ಯಾವ ಷೇರು ಮಾರುಕಟ್ಟೆಯೂ ಮೇಲಕ್ಕೆ ಎದ್ದಿಲ್ಲ. ಆದರೆ ಭಾರತ ಈ ಕುಸಿತವನ್ನು ಮೆಟ್ಟಿ ನಿಂತು ಇದೀಗ ಚೇತರಿಕೆಯತ್ತ ಸಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ತೆರಿಗೆ ನೀತಿಯಿಂದ ಜಾಗತಿಕ ಷೇರುಮಾರುಕಟ್ಟೆಗಳು ನಷ್ಟ ಅನುಭವಿಸಿತ್ತು. ವಿಶ್ವದ ಪ್ರಮುಖ ಷೇರುಮಾರುಕಟ್ಟೆಗಳು ಇನ್ನು ಚೇತರಿಕೆಯ ಆರಂಭ ಹಂತದಲ್ಲಿದೆ. ಆದರೆ ಭಾರತ ಆದ ನಷ್ಟವನ್ನು ಸರಿದೂಗಿಸಿಕೊಂಡಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಮಂಗಳವಾರ ಚೇತರಿಕೆ ಕಂಡಿದ್ದು,ಎನ್‌ಎಸ್‌ಇ-ನಿಫ್ಟಿ ಸೂಚ್ಯಂಕವು 2.4% ವರೆಗೆ ಏರಿದೆ.
ಟ್ರಂಪ್ ಸುಂಕದಿಂದಾದ ನಷ್ಟವನ್ನು ಭಾರತೀಯ ಷೇರು ಮಾರುಕಟ್ಟೆಯು ಕೇವಲ 7 ವಹಿವಾಟು ದಿನಗಳಲ್ಲಿ ವಸೂಲಿ ಮಾಡಿದೆ.