ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗುತ್ತಿದ್ದಂತೆ ಸಂತಸಗೊಂಡಿದ್ದ ತಮಿಳುನಾಡಿನ ವೆಲ್ಲೋರ್ ಗ್ರಾಮಸ್ಥರು, ಇದೀಗ ವಕ್ಫ್ ಮಂಡಳಿ ನಡೆ ಹಾಗೂ ಸ್ಥಳೀಯ ಶಾಸಕನ ಹೇಳಿಕೆಯಿಂದ ಆತಂಕಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕ ಹಸನ್ ಮೌಲಾನಾ, ಒಮ್ಮೆ ವಕ್ಫ್ ಆಸ್ತಿಯಾದರೆ ಯಾವತ್ತೂ ವಕ್ಫ್ ಆಸ್ತಿ. ಇಷ್ಟೇ ಅಲ್ಲ ವಕ್ಫ್ ಬೋರ್ಡ್‌ಗೆ ಬಾಡಿಗೆ ನೀಡಬೇಕು. ನಿಮ್ಮ ಸ್ಥಳ ಯಾವತ್ತೂ ನಿಮ್ಮದಲ್ಲ, ಅದು ವಕ್ಫ್‌ಗೆ ಸೇರಿದ್ದು ಎಂದಿದ್ದಾರೆ.
ಇಲ್ಲಿನ ದರ್ಗಾ ನೋಡಿಕೊಳ್ಳುವ ಆಡಳಿತ ಮಂಡಳಿಯಿಂದ ತಮ್ಮ ಭೂಮಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿದ ನೋಟಿಸ್ ಬಂದ ನಂತರ ಗ್ರಾಮದಲ್ಲಿ ಪ್ರತಿಭಟನೆ ಶುರುವಾಗಿದೆ. ಸುಮಾರು 150 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದು, ಎಷ್ಟು ಜನರಿಗೆ ನೋಟಿಸ್ ಬಂದಿದೆ ಎಂಬ ಬಗ್ಗೆ ನಿಖರ ಮಾಹಿತಿ ಬಂದಿಲ್ಲ.