ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಮಲ್ಪೆನಲ್ಲಿ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಟಾಯ್ಲೆಟ್ನಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದರಿಂದ ಅಪರಿಚಿತ ವ್ಯಕ್ತಿ ಮೇಲೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿದಾಗ ಮಗುವಿನ ತಾಯಿ ಯಾರೆಂದು ಪತ್ತೆ ಮಾಡಿದ್ದಾರೆ.
ಸ್ಥಳೀಯ ಯುವತಿಯೊಬ್ಬಳ ಮಗು ಇದು ಎಂಬುದು ಗೊತ್ತಾಗಿದೆ. ಆಕೆಯಿಂದ ಸ್ವ-ಇಚ್ಛಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ. ಏಳೂವರೆಯಿಂದ ಎಂಟು ತಿಂಗಳು ನಡುವಯಸ್ಸಿನ ಭ್ರೂಣ ಇದಾಗಿದೆ. ಯಾವುದೇ ಪ್ರೊಸೀಜರ್ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಏಕಾಏಕಿ ಹೊಟ್ಟೆನೋವು ಬಂದಿರುವುದರಿಂದ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.