ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾಗಳಲ್ಲಿ ಹೆಣ್ಣುಮಕ್ಕಳಿಗೆ ಈ ಸೀನ್‌ನಲ್ಲಿ ನಟಿಸೋದು ಅತೀ ಕಷ್ಟ. ಮೈ ಕೈ ನಡುಗುತ್ತದೆ. ಸೀನ್ ಮುಗಿದ ಎಷ್ಟೋ ಸಮಯ, ಎಷ್ಟೋ ದಿನ ಮನಸ್ಸು ಭಾರವಾಗಿರುತ್ತದೆ ಎಂದು ನಟಿ ದಿಯಾ ಮಿರ್ಝಾ ಹೇಳಿದ್ದಾರೆ.
ಅತ್ಯಾಚಾರದ ಸೀನ್‌ನಲ್ಲಿ ಭಾಗಿಯಾಗೋದು ಅತ್ಯಂತ ನೋವು ಹಾಗೂ ಕೆಟ್ಟ ಅನುಭವ. ಸಿನಿಮಾ ಅನ್ನೋದು ಮರೆತುಹೋಗಿ ತಮ್ಮ ಮೇಲೆ ನಿಜವಾಗಿಯೂ ಅತ್ಯಾಚಾರ ಆಗುತ್ತಿದೆ ಎಂದು ಅನಿಸುತ್ತದೆ. ದೇಹ ಮನಸ್ಸು ಯಾವುದೂ ಮಾತು ಕೇಳೋದಿಲ್ಲ. ಆ ಸಮಯ ಭಯದಿಂದ ನಡುಗಿ ಹೋಗುತ್ತೇವೆ. ಕಟ್ ಎಂದ ತಕ್ಷಣವೇ ವಾಂತಿ ಮಾಡಿದ್ದೆ ಎಂದು ನಟಿ ಹೇಳಿದ್ದಾರೆ.
2019ರಲ್ಲಿ ‘ಕಾಫಿರ್’ ಹೆಸರಿನ ವೆಬ್ ಸೀರಿಸ್ ಬಂದಿತ್ತು. ಈ ಸರಣಿಯನ್ನು ಸೋನಂ ನಾಯರ್ ಅವರು ನಿರ್ದೇಶನ ಮಾಡಿದ್ದರು. ಈ ಸರಣಿ ಈಗ ಸಾಕಷ್ಟು ಎಡಿಟಿಂಗ್ ಬಳಿಕ ಸಿನಿಮಾ ರೂಪದಲ್ಲಿ ಹೊರ ಬರುತ್ತಿದೆ. ಪಾಕಿಸ್ತಾನದ ಮಹಿಳೆ ಕೈನಾಜ್ ಅಖ್ತರ್ ಭಾರತದಲ್ಲಿ ಬಂದು ಸಿಲುಕುತ್ತಾಳೆ.
ಆಕೆಯ ಮೇಲೆ ಭಯೋತ್ಪಾದನೆಯ ಆರೋಪ ಬರುತ್ತದೆ. ನಿಜಕ್ಕೂ ಆಕೆ ಭಯೋತ್ಪಾದಕಿಯಾ? ಅವಳ ಮೇಲೆ ಈ ಆರೋಪ ಬಂದಿದ್ದು ಹೇಗೆ ಎಂಬುದನ್ನು ಸಿನಿಮಾ ವಿವರಿಸುತ್ತದೆ. ಆಕೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.