ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದೊಳಗಿರುವ ದೇವಾಲಯಕ್ಕೆ ಭೇಟಿ ನೀಡಲು ಪೋಷಕರೊಂದಿಗೆ ಹೋಗಿದ್ದ 7 ವರ್ಷದ ಬಾಲಕನ್ನು ಹುಲಿ ಎಳೆದುಕೊಂಡು ಹೋಗಿ ಕೊಂದಿರುವ ಘಟನೆ ನಡೆದಿದೆ.
ಏಳು ವರ್ಷದ ಕಾರ್ತಿಕ್ ಸುಮನ್ ತನ್ನ ಚಿಕ್ಕಪ್ಪ ಹಾಗೂ ಅಜ್ಜಿ ಜೊತೆ ದೇವಸ್ಥಾನಕ್ಕೆ ಬಂದಿದ್ದ. ಅಲ್ಲಿ ದೇವರ ದರುಶನಕ್ಕೆ ಹೋಗುವಾಗ ಹುಲಿಯೊಂದು ಬಂದು ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಆತನನ್ನು ಎಳೆದುಕೊಂಡು ಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮಗುವಿನ ಮೃತದೇಹವನ್ನು ಪೋಷಕರಿಗೆ ನೀಡಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿದ ನಂತರ ಅವರು ರಸ್ತೆಯ ಪಕ್ಕದಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದರು. ದುರಂತ ಸಾವಿಗೆ ಸ್ವಲ್ಪ ಮೊದಲು ತೆಗೆದ ಫೋಟೋಗಳಲ್ಲಿ, ಜೀನ್ಸ್ ಮತ್ತು ನೀಲಿ ಟಿ-ಶರ್ಟ್ ಧರಿಸಿದ ಸುಮನ್ ನಾಚಿಕೆಯಿಂದ ನಗುತ್ತಾ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ.
ಒಂದು ಫೋಟೋದಲ್ಲಿ ನಗುತ್ತಿರುವ ಹುಡುಗ ಕೋತಿಯ ಪಕ್ಕದಲ್ಲಿ ಕುಳಿತಿದ್ದಾನೆ. ಈ ಫೋಟೊ ನೋಡಿದರೆ ಹೊಟ್ಟೆ ಉರಿಯುವಂತಾಗೋದು ನಿಜ!