ಇತ್ತೀಚೆಗೆ ಯುವಪೀಳಿಗೆಯಲ್ಲಿ ಬಾಯಿಯ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಬಾಯಿ ಕ್ಯಾನ್ಸರ್ ದವಡೆ ಮತ್ತು ನಾಲಿಗೆಯ ಕ್ಯಾನ್ಸರ್‌ಗಳನ್ನು ಒಳಗೊಂಡಿದ್ದು, ಇದನ್ನು ಒಟ್ಟಾರೆಯಾಗಿ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಈ ಕ್ಯಾನ್ಸರ್ಗಳು ಇಂದು ಯುವಕರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿವೆ.
ಹೆಡ್ ಆ್ಯಂಡ್ ನೆಕ್ ಕ್ಯಾನ್ಸರ್ಗಳಿಗೆ ಹೆಚ್ಚಾಗಿ 25-45 ವರ್ಷದ ವಯೋಮಾನದವರು ಸಂತ್ರಸ್ತರಾಗುತ್ತಿದ್ದಾರೆ. ಯುವ ಜನತೆಯಲ್ಲಿ ಏರಿಕೆಯಾಗುತ್ತಿರುವ ಈ ಸಂಖ್ಯೆ ಆತಂಕ ಮೂಡಿಸುತ್ತಿದೆ. ಗುಟ್ಕಾ, ಪಾನ್ ಮಸಾಲ, ಧೂಮಪಾನ ಮತ್ತು ಹಾನಿಕಾರಕ ವಸ್ತುಗಳ ಸೇವನೆಗೆ ಯುವ ಜನರು ಒಳಗಾಗುತ್ತಿದ್ದು, ಹೈದರಾಬಾದ್ನ ಎಂಎನ್‌ಜೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಹೆಚ್ಚಿನವರು ಇದೇ ವಯಸ್ಸಿನವರಾಗಿದ್ದಾರೆ.
ಲಕ್ಷಣಗಳೇನು?
- ನಿರಂತರ ಜ್ವರ
- ಅನಿರೀಕ್ಷಿತ ತೂಕ ನಷ್ಟ, ತಲೆ ಸುತ್ತು
- ಹಸಿವಿನ ನಷ್ಟ
- ನುಂಗುವುದು ಕಷ್ಟವಾಗುವುದು
- ಬಾಯಿ, ದವಡೆ ಅಥವಾ ನಾಲಿಗೆಯಲ್ಲಿ ಹುಣ್ಣು.
- ಬಾಯಿ ಅಥವಾ ತುಟಿಯಲ್ಲಿ ಗಾಯ, ರಕ್ತ ದಿನಗಟ್ಟಲೆ ಸೋರುವುದು. ಎರಡು ವಾರವಾದ್ರೂ ವಾಸಿಯಾಗದೇ ಇರುವುದು.
- ನಾಲಗೆಯ ಮೇಲೆ ಡ್ರೈ ಹಾಗೂ ಗುಳ್ಳೆಗಳು ಕಾಣುವುದು
- ಮುಖ, ಕುತ್ತಿಗೆ ಹಾಗೂ ಬಾಯಿಯಲ್ಲಿ ನಂಬ್‌ನೆಸ್ ಅಥವಾ ನೋವು.
- ಊಟ ಮಾಡಲು, ನುಂಗಲು ಹಾಗೂ ಮಾತನಾಡಲು ಕಷ್ಟವಾಗುವುದು.
- ಕಿವಿನೋವು ಹಾಗೂ ಬಾಯಿಯಿಂದ ದುರ್ನಾತ