February 1, 2026
Sunday, February 1, 2026
spot_img

30 ವರ್ಷದ ಸಿನಿ ಪಯಣ | ಯಶಸ್ಸಿನ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಕಿಚ್ಚನ ‘Thank You’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಪ್ರಮುಖ ನಟ ಕಿಚ್ಚ ಸುದೀಪ್ ತಮ್ಮ ಸಿನಿ ಬದುಕಿನ 30 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಸುದೀಪ್, ತಮ್ಮ ಮೂರು ದಶಕಗಳ ಯಶಸ್ವಿ ಪಯಣದಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ನಟನಾಗಿ ಕ್ಯಾಮೆರಾ ಎದುರು ನಿಂತ ಮೊದಲ ದಿನವನ್ನು ತಮ್ಮ ಸಿನಿ ಬದುಕಿನ ಆರಂಭವೆಂದು ಪರಿಗಣಿಸಿರುವ ಸುದೀಪ್, ಜನವರಿ 31ಕ್ಕೆ 30 ವರ್ಷ ಪೂರೈಸಿದ್ದಾರೆ. ಆರಂಭದ ದಿನಗಳ ಕನಸುಗಳು, ಅನುಮಾನಗಳು ಮತ್ತು ಭರವಸೆಗಳನ್ನೂ ನೆನಪಿಸಿಕೊಂಡ ಅವರು, ಇಂದು ತಾವು ತಲುಪಿರುವ ಹಂತಕ್ಕೆ ಕಾರಣವಾದುದು ಪ್ರೇಕ್ಷಕರು ಮತ್ತು ಚಿತ್ರರಂಗ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಅಭಿಮಾನಿಗಳನ್ನು ತಮ್ಮ ಶಕ್ತಿ ಮತ್ತು ಪ್ರೇರಣೆ ಎಂದು ಬಣ್ಣಿಸಿದ ಸುದೀಪ್, ನಿರ್ದೇಶಕರು, ಬರಹಗಾರರು, ನಿರ್ಮಾಪಕರು ನೀಡಿದ ನಂಬಿಕೆ ಹಾಗೂ ಅವಕಾಶಗಳನ್ನು ಸ್ಮರಿಸಿದ್ದಾರೆ. ಸಹ ಕಲಾವಿದರು ಮತ್ತು ತಂತ್ರಜ್ಞರ ತೆರೆಯ ಹಿಂದಿನ ಶ್ರಮವಿಲ್ಲದೆ ಸಿನಿಮಾ ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಮಾಧ್ಯಮಗಳ ಬೆಂಬಲ, ಕುಟುಂಬ ಮತ್ತು ಸ್ನೇಹಿತರ ಸಹಕಾರಕ್ಕೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗವೇ ತನ್ನ ಗುರುತು ಮತ್ತು ಹೆಮ್ಮೆ ಎಂದು ಹೇಳಿದ ಸುದೀಪ್, ಮುಂದೆಯೂ ಹೆಚ್ಚು ಶ್ರಮಿಸಿ ಕಲೆಗೆ ಗೌರವ ನೀಡುವ ಭರವಸೆಯೊಂದಿಗೆ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !