ಹೊಸದಿಗಂತ ಹಾಸನ :
ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ತಾಲ್ಲೂಕಿನ ರಾಮೇಶ್ವರ ಬಡಾವಣೆ ಬಳಿ ನಡೆದಿದೆ.
ಶಿವಪ್ರಸಾದ್ (32) ಸಾವನ್ನಪ್ಪಿದ ವ್ಯಕ್ತಿ. ದಿಡಗ ಗ್ರಾಮ ಪಂಚಾಯ್ತಿಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಆಲೂರು ತಾಲ್ಲೂಕಿನ, ಸಿದ್ದಾಪುರ ಗ್ರಾಮದವರು. ಅತಿಯಾಗಿ ಮದ್ಯ ಸೇವಿಸುತ್ತಿದ್ದ ಶಿವಪ್ರಸಾದ್ ನಿನ್ನೆ ತಡರಾತ್ರಿ ಮದ್ಯಸೇವಿಸಿ ತಮ್ಮ ರೆನಾಲ್ಟೊ ಕಾರಿನೊಳಗೆ ಮಲಗಿದ್ದು ಕಾರಿನಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾರು ನಿಂತಲ್ಲೆ ನಿಂತಿರುವುದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮ್ಯಾಕಾನಿಕ್ ಕರೆಸಿ ಕಾರಿನ ಡೋರ್‌ಲಾಕ್ ತೆಗೆದು ಪರಿಶೀಲಿಸಿದ್ದಾರೆ. ಶಿವಪ್ರಸಾದ್ ಸಾವಿಗೆ ಅಸಲಿ ಕಾರಣ ತನಿಖೆ ನಂತರ ತಿಳಿಯಬೇಕಿದೆ.