ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಅವರ ಮಾಲೀಕರು ಮತ್ತು ಸಹಾಯಕರು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಕಳ್ಳತನದ ಶಂಕೆಯಿಂದ ಅವರ ಉಗುರುಗಳನ್ನು ತೆಗೆದು ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯವರಾದ ಅಭಿಷೇಕ್ ಭಂಬಿ ಮತ್ತು ವಿನೋದ್ ಭಂಬಿ ಅವರನ್ನು ಗುತ್ತಿಗೆದಾರರ ಮೂಲಕ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ರಭಟ್ಟಿ ಪ್ರದೇಶದ ಛೋಟು ಗುರ್ಜರ್ ಒಡೆತನದ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ನೇಮಿಸಲಾಗಿತ್ತು.
ಮೊನ್ನೆ ಏಪ್ರಿಲ್ 14 ರಂದು, ಗುರ್ಜಾರ್ ಮತ್ತು ಅವರ ಸಹಚರ ಮುಖೇಶ್ ಶರ್ಮ ಎಂಬುವವರು ಇಬ್ಬರು ಕಾರ್ಮಿಕರ ಮೇಲೆ ಕಳ್ಳತನದ ಆರೋಪ ಹೊರಿಸಿದರು. ನಂತರ ಇಬ್ಬರನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಶಾಕ್ ನೀಡಿ, ಅವರ ಉಗುರುಗಳನ್ನು ತೆಗೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.