ಡ್ರಗ್ಸ್ ಕೇಸ್ ನಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾದಕವಸ್ತು ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಚ್ಚಿಯ ಹೋಟೆಲ್ ಒಂದರಿಂದ ಮಾದಕವಸ್ತು ದಾಳಿಯ ಸಂದರ್ಭ ಪರಾರಿಯಾಗಿದ್ದ ಚಾಕೊ ಇದೀಗ ಪೊಲೀಸರು ಬಂಧಿಸಿದ್ದಾರೆ.

ಅವರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತಿ ಪದಾರ್ಥಗಳ (NDPS) ಕಾಯ್ದೆಯ ಸೆಕ್ಷನ್ 27 (ಯಾವುದೇ ಮಾದಕ ದ್ರವ್ಯ ಅಥವಾ ಮನೋವಿಕೃತಿ ವಸ್ತುವಿನ ಸೇವನೆ) ಮತ್ತು 29ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ, ಪೊಲೀಸ್ ತಂಡ ಹೋಟೆಲ್‌ಗೆ ಭೇಟಿ ನೀಡಿದ್ದ ವಿಚಾರ ತಿಳಿದ ಕೂಡಲೇ ಶೈನ್‌ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಯ ಕಿಟಕಿಯಿಂದ ಎರಡನೇ ಮಹಡಿಗೆ ಹಾರಿದ್ದರು. ನಂತರ ಅದೇ ಮಹಡಿಯಲ್ಲಿ ನಿರ್ಮಿಸಲಾದ ‘ಈಜುಕೊಳ’ದ ಮೂಲಕ ಮೆಟ್ಟಿಲುಗಳ ಕೆಳಗೆ ಇಳಿದು ಓಡಿಹೋದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!