January 31, 2026
Saturday, January 31, 2026
spot_img

ಆ ಡ್ರೆಸ್ ಹಾಕಿ ಬಾ, ಯಾವ ಆಂಗಲ್‌ನಲ್ಲಿ ಹೇಗೆ ಕಾಣ್ತಿಯಾ ನೋಡ್ಬೇಕು: ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ನಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟಾರ್ ನಾಯಕಿಯಾದ ಐಶ್ವರ್ಯ ರಾಜೇಶ್ ಅವರು ತಮ್ಮ ಜೀವನದಲ್ಲಿ ನಡೆದ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ.

ಈ ವಿಚಾರವಾಗಿ ಮಾತಾಡಿರುವ ಐಶ್ವರ್ಯ ರಾಜೇಶ್, ನಾನು ಚಿತ್ರರಂಗಕ್ಕೆ ಬರುವ ಮುನ್ನ ನಮ್ಮ ಅಣ್ಣನ ಜೊತೆ ಒಂದು ಫೋಟೊಶೂಟ್‌ಗೆ ಹೋಗಿದ್ದೆ. ನಮ್ಮ ಅಣ್ಣನನ್ನು ಸ್ಟುಡಿಯೋದ ಹೊರಗಡೆ ಕೂರಿಸಿ ನನಗೆ ಒಂದು ತುಂಡು ಬಟ್ಟೆ ಕೊಟ್ಟರು. ಇದನ್ನು ಹಾಕ್ಕೊಂಡು ಬಾ, ನಿನ್ನ ಬಾಡಿ ನೋಡಬೇಕು ಎಂದ್ರು. ಯಾವ ಆಂಗಲ್‌ನಲ್ಲಿ ಹೇಗೆ ಕಾಣ್ತಿಯಾ, ಹೇಗೆ ಫೋಟೊ ಹಿಡಿಯಬಹುದು ಅಂತೆಲ್ಲಾ ಹೇಳ್ತಿದ್ರು. ಮೂವರು ಆ ಬಟ್ಟೆ ಹಾಕಿಕೊಳ್ಳುವಂತೆ ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ರು. ನಾನು ಒಪ್ಪಿಕೊಳ್ಳುವ ಹಂತಕ್ಕೆ ಹೋಗಿದ್ದೆ. ಅಷ್ಟರಲ್ಲಿ ನನಗೆ ಏನು ಅನ್ನಿಸಿತೋ ಗೊತ್ತಿಲ್ಲ. ನಮ್ಮ ಅಣ್ಣನ ಅನುಮತಿ ಕೇಳಬೇಕು ಎಂದು ಹೊರಗೆ ಬಂದುಬಿಟ್ಟೆ ಎಂದಿದ್ದಾರೆ.

ಈ ರೀತಿ ಎಷ್ಟು ಹೆಣ್ಣು ಮಕ್ಕಳಿಗೆ ಹೀಗೆ ನಡೆದಿದೆಯೋ ಗೊತ್ತಿಲ್ಲ. ಆ ಘಟನೆ ಮಾತ್ರ ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ಈ ಬಗ್ಗೆ ಸಾಕಷ್ಟು ಜನರಿಗೆ ಹೇಳಿ ಆ ಫೋಟೊ ಸ್ಟುಡಿಯೋ ಬಗ್ಗೆ ಕಂಪ್ಲೇಟ್ ಮಾಡಿದ್ದೆ ಎಂದು ಅವರು ವಿವರಿಸಿದ್ದಾರೆ.

ಅದೇ ರೀತಿ ಶೂಟಿಂಗ್‌ಗೆ 10 ನಿಮಿಷ ತಡವಾಗಿ ಬಂದಿದ್ದಕ್ಕೆ ನಿರ್ದೇಶಕ ಬೈದಿದ್ದರು. ಅವರು ಮತ್ತೊಬ್ಬ ನಟಿಯ ಜೊತೆ ಹೋಲಿಕೆ ಮಾಡಿ ಮಾತನಾಡಿದ್ದರು. ತಪ್ಪು ಮಾಡದೇ ಇದ್ದರೂ ನೂರಾರು ಸಹ ಕಲಾವಿದರ ಮುಂದೆ ಬೈದಿದ್ದು ಬೇಸರ ತಂದಿತ್ತು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !