ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯಿಂದ ರಾಜ್ಯದ ಬಹುಸಂಖ್ಯಾತ ದುರ್ಬಲ ವರ್ಗದವರಿಗೆ ಸಹಾಯ ಆಗಲಿದೆ. ಸಮಾಜದಲ್ಲಿರುವ ಅಸಮಾನತೆಯನ್ನು ದೂರ ಮಾಡುವುದೇ ಗಣತಿಯ ಉದ್ದೇಶ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂತರಾಜು- ಜಯಪ್ರಕಾಶ್ ಹೆಗ್ಡೆ ವರದಿ ಇನ್ನೂ ಮಂಡನೆಯೇ ಆಗಿಲ್ಲ. ಒಂದು ವೇಳೆ ಗಣತಿಯ ದತ್ತಾಂಶ ಸರಿಯಿಲ್ಲ ಎಂದಾದರೆ ಸರಿಪಡಿಸುವ ಕೆಲಸ ಮಾಡಬಹುದು. ಆದರೆ ವರದಿ ಮಂಡನೆ ಆಗದೆ, ವಿಚಾರವೇ ಗೊತ್ತಿಲ್ಲದೆ ವಿರೋಧ ಮಾಡುವುದು ತಪ್ಪು ಎಂದರು.
ಜಾತಿ ಗಣತಿ ಮಾಡುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆ. ಈ ಹಿಂದೆ ಭೂಮಸೂದೆ ಕಾನೂನು, ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದಾಗಲೂ ಆಗಿನ ಜನಸಂಘ ಮತ್ತಿತರ ಪಕ್ಷಗಳು ವಿರೋಧ ಮಾಡಿದ್ದವು. ಆದರೆ ಈ ಕಾನೂನುಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದರು. ಈಗ ಜಾತಿ ಗಣತಿಯೂ ಬಡವರ ಪರವಾಗಿರುವ ನಿರ್ಧಾರಗಳಲ್ಲಿ ಒಂದು ಎಂದರು.