ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶಿವಂ ದುಬೆ ಹಾಗೂ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಸಿಎಸ್ಕೆ 20 ಓವರ್ಗಳಲ್ಲಿ5 ವಿಕೆಟ್ ಕಳೆದುಕೊಂಡು 176 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿ ಆರಂಭ ಪಡೆಯಿತು. ರಚಿನ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಇತ್ತ ಇಂದೇ ಪದಾರ್ಪಣೆ ಮಾಡಿದ 17 ವರ್ಷದ ಆಯುಷ್ ಮ್ಹಾತ್ರೆ ಸ್ಫೋಟಕ ಆರಂಭ ಪಡೆದರು. 15 ಎಸೆತಗಳಲ್ಲಿ 32 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ, 2 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ರಶೀದ್ 20 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು.
ಆದರೆ ಸ್ಟಾರ್ ಆಲ್ರೌಂಡರ್ ಶಿವಂ ದುಬೆ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 50 ರನ್ ಗಳಿಸಿ ಔಟಾದರು. ಇನ್ನು ಜಡೇಜಾ ಕೂಡ ಅರ್ಧಶತಕ ಸಿಡಿಸಿದರು. 4ನೇ ಕ್ರಮಾಂಖದಲ್ಲಿ ಬಡ್ತಿ ಪಡೆದು ಆಡಿದ ಜಡೇಜಾ 5 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳಿಸಿದರು. ಧೋನಿ 4 ರನ್ಗಳಿಸಷ್ಟೇ ಶಕ್ತವಾದರೆ, ಜೇಮೀ ಓವರ್ಟನ್ ಅಜೇಯ 4 ರನ್ಗಳಿಸಿದರು.