ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಬೇಕಾದರೂ ಮುಲಾಜಿಲ್ಲದೇ ತೆಗೆದುಕೊಳ್ಳುವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು 30 ವರ್ಷಗಳಲ್ಲಿ ಎಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದರೋ ನಾನು ಒಂದು ವರ್ಷದಲ್ಲಿ ಅಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದೇನೆ. ಯಾರನ್ನೋ ಖುಷಿಪಡಿಸಲು ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿಲ್ಲ ಎಂದರು.
ಕೇಂದ್ರದ ನಾಯಕರು ನನ್ನನ್ನು ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಸುಮ್ಮನೆ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಸರಿಹೋಗಬೇಕು. ಅಧಿಕಾರಕ್ಕೆ ಬರಬೇಕು ಎಂಬುದರ ಜತೆಗೆ ನಾವು ಕರ್ನಾಟಕದಲ್ಲಿ ಗೆದ್ದರೆ, ಪಕ್ಕದ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನೂ ಗೆಲ್ಲಬಹುದು. ನನ್ನ ಗುರಿ ಸ್ಪಷ್ಟವಾಗಿದೆ. ಸಂಘಟನೆ ವಿಚಾರವಾಗಿ ಖುದ್ದಾಗಿ ನಾನೇ ಅಖಾಡಕ್ಕೆ ಇಳಿಯುವೆ ಎಂದರು.