ಗೊತ್ತಿರುವವರು ಜಮ್ಮು ಕಾಶ್ಮೀರಕ್ಕೆ ಟ್ರಿಪ್‌ ಹೋಗಿದ್ದರೆ ಮಾಹಿತಿ ಹಂಚಿಕೊಳ್ಳಿ: ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಿಚಯದವರು, ಸ್ನೇಹಿತರು ಹಾಗೂ ಸಂಬಂಧಿಗಳು ಜಮ್ಮು ಕಾಶ್ಮೀರಕ್ಕೆ ಟ್ರಿಪ್‌ ಹೋಗಿದ್ದರೆ ಅವರ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ರಾಜ್ಯ ಸರ್ಕಾರ ಕೋರಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದ ಭೀಕರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಇನ್ನೂ ಹಲವಾರು ಕನ್ನಡಿಗರು ಅಲ್ಲಿ ಸಿಲುಕಿರಬಹುದು ಎನ್ನಲಾಗಿದ್ದು, ರಾಜ್ಯ ಸರ್ಕಾರ ಅವರನ್ನು ಮರಳಿ ಕರೆತರಲು ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಟೂರ್‌ ಆಪರೇಟರ್ಸ್‌ ಹಾಗೂ ಟ್ರಾವೆಲ್‌ ಏಜೆಂಟ್‌ಗಳಿಗೆ ತಮ್ಮ ಮೂಲಕ ಯಾರೆಲ್ಲಾ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿಯನ್ನು ನೀಡುವಂತೆ ಕೋರಿದೆ.

ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯದ ಯಾರೇ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದರೆ ಅಂಥವರ ಮಾಹಿತಿಯನ್ನು ನೀಡಿ ಎಂದು ಕೇಳಿದೆ.

ಸಹಾಯವಾಣಿ ಸಂಖ್ಯೆ

080-43344334
080-43344335
080-43344336
080-43344342

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!