ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯ ಕೆಲವೇ ಗಂಟೆಗಳಲ್ಲಿ, ಶಂಕಿತ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗಗೊಂಡಿದೆ.
ವೀಡಿಯೊವೊಂದರಲ್ಲಿ ತೆಗೆದ ಸ್ಕ್ರೀನ್‌ಶಾಟ್‌ನಲ್ಲಿ, ಭಯೋತ್ಪಾದಕನೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಕುರ್ತಾದಲ್ಲಿ ಎಕೆ ಸರಣಿಯ ಅಸಾಲ್ಟ್ ರೈಫಲ್‌ನೊಂದಿಗೆ ಕಾಣಿಸಿಕೊಂಡಿದ್ದಾನೆ. ಭದ್ರತಾ ಸಂಸ್ಥೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಇವನೂ ಒಬ್ಬ ಎಂದು ಹೇಳಿದ್ದಾರೆ.
ಉಗ್ರರು ಕೆಲವರು ಸ್ಥಳೀಯರಂತೆ ಕುರ್ತಾ ಧರಿಸಿ ಬಂದರೆ, ಪ್ರತ್ಯಕ್ಷ ದರ್ಶಿಗಳು ಹೇಳಿರುವಂತೆ ಕೆಲವರು ಸ್ಥಳೀಯ ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದ ಕಾರಣ, ಪ್ರವಾಸಿಗರಿಗೆ ಅವರು ಭಯೋತ್ಪಾದಕರೆಂದು ತಿಳಿಯಲಿಲ್ಲ ಎನ್ನಲಾಗಿದೆ.