ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ವಿಧಾನಸೌಧದ ಮಾರ್ಗದರ್ಶಿ ಪ್ರವಾಸಕ್ಕಾಗಿ ದರ ಫಿಕ್ಸ್ ಮಾಡಿದೆ. ಇದರ ಪ್ರಕಾರ ಪ್ರತಿ ವ್ಯಕ್ತಿಗೆ 150 ರೂ. ಟಿಕೆಟ್ ಶುಲ್ಕವನ್ನು ನಿಗದಿಪಡಿಸಿದೆ.
ಭಾನುವಾರ, ಎರಡನೇ ಶನಿವಾರ ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಧಾನಸೌಧ ಪ್ರವಾಸವನ್ನು ನಡೆಸಬಹುದಾಗಿದೆ.
ವಿಧಾನಸೌಧದ ಮಾರ್ಗದರ್ಶಿ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 150 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸುವ ಪ್ರಸ್ತಾವನೆಯನ್ನು ನಾವು ಅನುಮೋದಿಸಿದ್ದೇವೆ. ವಿಧಾನಸಭೆ ಮತ್ತು ಪರಿಷತ್ತು ಮತ್ತು ಇತರ ಸ್ಥಳಗಳಿಗೆ ಜನರನ್ನು ಕಟ್ಟಡದ ಒಳಗೆ ಕರೆದೊಯ್ಯಲಾಗುತ್ತದೆ.
ಪ್ರವಾಸಿ ಗೈಡ್ ಗಳು ಕಟ್ಟಡದ ಇತಿಹಾಸ ಮತ್ತು ಮಹತ್ವವನ್ನು ವಿವರಿಸುತ್ತಾರೆ. ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲರಿಗೂ ಶುಲ್ಕ ಒಂದೇ ಆಗಿರುತ್ತದೆ. ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾತ್ರ ಬುಕ್ ಮಾಡಬೇಕು, ಅಲ್ಲಿ ಜನರು ಕೆಲವು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.