ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರರು ಮಂಗಳವಾರ ದಾಳಿ ನಡೆಸಿದ್ದ ಕಾಶ್ಮೀರದ ಪಹಲ್ಗಾಮ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ.
ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಪೊಲೀಸರ ಸಮವಸ್ತ್ರ ಹಾಗೂ ಕೆಲವರು ಸ್ಥಳೀಯರಂತೆ ಬಿಂಬಿಸಲು ಕುರ್ತಾ ಧರಿಸಿ ಬಂದಿದ್ದರು.
ಹುಲ್ಲು ಹಾಸುಗಳ ಮೇಲೆ ಕುಳಿತು ಆನಂದಿಸುತ್ತಿದ್ದ ಪುರುಷರ ಪ್ಯಾಂಟ್ ಬಿಚ್ಚಿಸಿ ಕೇವಲ ಹಿಂದೂಗಳ ಮೇಲಷ್ಟೇ ದಾಳಿ ನಡೆಸಿದ್ದಾರೆ. ಗಂಡಸರ ಮೇಲೆ ಮಾತ್ರ ದಾಳಿ ನಡೆಸಿ, ಹೆಂಗಸರಿಗೆ ನಿಮ್ಮ ಪ್ರಧಾನಿ ಮೋದಿಗೆ ಹೋಗಿ ಹೇಳಿ ಎಂದು ಹೇಳಿದ್ದಾರೆ. ಘಟನೆಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅದರಲ್ಲಿ ಇಬ್ಬರು ವಿದೇಶಿ ಪ್ರಜೆಗಳೂ ಇದ್ದಾರೆ.
#WATCH | J&K | Union Home Minister Amit Shah reviews the security situation at Baisaran in Pahalgam, following yesterday’s terror attack, which claimed many lives pic.twitter.com/ZIdolyvnaV
— ANI (@ANI) April 23, 2025