ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರದ ಇಬ್ಬರು ಪ್ರಮುಖ ಸಚಿವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲ ಆರ್.ಎನ್. ರವಿ ಭಾನುವಾರ ಸಚಿವರಾದ ವಿ. ಸೆಂಥಿಲ್‌ಬಾಲಾಜಿ ಮತ್ತು ಕೆ. ಪೊನ್ಮುಡಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ .
ಸೆಂಥಿಲ್ ಬಾಲಾಜಿ ವಿರುದ್ಧ ಅಕ್ರಮ ಹಣವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ಹಿಂದೆ ಇಡಿ ಅವರನ್ನು ಬಂಧಿಸಿತ್ತು. ಅಂತೆಯೇ ಇಂದು ರಾಜಿನಾಮೆ ನೀಡಿರುವ ಕೆ ಪೊನ್ಮುಡಿ ಕೂಡ ಹಿಂದು ಧರ್ಮದ ಕುರಿತು ಮತ್ತು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷೀಯರಿಂದಲೂ ಟೀಕೆ ಎದುರಿಸಿದ್ದರು.