ಹೊಸದಿಗಂತ ವರದಿ ಪುತ್ತೂರು:
ಮುಂಜಾನೆ ವೇಳೆ ಕೆಲಸಕ್ಕೆಂದು ರಬ್ಬರ್ ತೋಟಕ್ಕೆ ತೆರಳಿದ ಜೀವವೊಂದು ಕಾಡಾನೆಯ ಕ್ರೌರ್ಯಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ವ್ಯಾಪ್ತಿಯ, ಕಣಿಯಾರು ಮಲೆ ಅರಣ್ಯದಂಚಿನಲ್ಲಿರುವ ಅರ್ತಿಯಡ್ಕ ಸಿಆರ್‌ಸಿ ಕಾಲನಿಯಲ್ಲಿ ಸಂಭವಿಸಿದೆ.
ರಬ್ಬರ್ ಹಾಲು ಸಂಗ್ರಹಿಸಲು ಮನೆಯಿಂದ ಹೊರಟಿದ್ದ ಅರ್ತಿಯಡ್ಕದ ಮಹಿಳೆಯ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ.
ಕಳೆದೊಂದು ವಾರದಿಂದ ಈ ಪರಿಸರದಲ್ಲಿ ಕಾಡಾನೆ ಹಾವಳಿ ಹೆಚ್ಚಿತ್ತು. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ದುರ್ಘಟನೆ ನಡೆದಿದೆ. ಮೃತ ಮಹಿಳೆ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.