ಮದುವೆ, ಹಬ್ಬ, ಅಥವಾ ಯಾವುದೇ ಕಾರ್ಯಕ್ರಮವಾಗಿದ್ದರೂ ಟ್ರೆಡಿಷನಲ್ ಡ್ರೆಸ್ ಯಾವಾಗಲೂ ಮುಖ್ಯ. ಸಾಂಪ್ರದಾಯಿಕ ಬಟ್ಟೆಗಳಲ್ಲಿ ಸೀರೆ, ಸಲ್ವಾರ್ ಸೂಟ್, ಲೆಹೆಂಗಾ ಮತ್ತು ಅನಾರ್ಕಲಿ ಹೀಗೆ ಹತ್ತು ಹಲವು ಆಯ್ಕೆಗಳಿವೆ.
ನೀವು ಟ್ರೆಡಿಷನಲ್ ಡ್ರೆಸ್ ಹಾಕಿದಾಗ ಅದನ್ನು ಸರಿಯಾಗಿ ಹಾಕಬೇಕು. ಸುಂದರವಾದ ಭಾರತೀಯ ಉಡುಪನ್ನು ಧರಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ.
ಬಟ್ಟೆಯ ಕ್ವಾಲಿಟಿ ಆಯ್ಕೆ
ಬಟ್ಟೆಯ ಕ್ವಾಲಿಟಿ ಆಯ್ಕೆ ಮಾಡುವುದು ಬಹಳ ಮುಖ್ಯ. ಫ್ಯಾಬ್ರಿಕ್ ಆಯ್ಕೆಯಲ್ಲಿ ತಪ್ಪು ಮಾಡಬಾರದು. ಹವಾಮಾನದ ಆಧಾರದ ಮೇಲೆ ನೀವು ಬಟ್ಟೆಯನ್ನು ಆರಿಸಬೇಕಾಗುತ್ತದೆ. ಬಿಸಿಯಾಗಿದ್ದರೆ, ನೀವು ಆರಾಮದಾಯಕವಾದ ಬಟ್ಟೆ ಹಾಕಬೇಕು. ವಿಪರೀತ ಶಾಖ ಅಥವಾ ಶೀತವು ನಿಮ್ಮ ಬಟ್ಟೆಯ ಮೇಲೆ ಪರಿಣಾಮ ಬೀರಬಹುದು.
ಫಿಟ್ ಆಗುವ ಬಟ್ಟೆ
ಸಾಂಪ್ರದಾಯಿಕ ಬಟ್ಟೆಗಳಲ್ಲಿ ಸುಂದರವಾಗಿ ಕಾಣಲು ಉತ್ತಮ ಮಾರ್ಗವೆಂದರೆ ನಿಮಗೆ ಫಿಟ್ ಆಗುವ ಬಟ್ಟೆಗಳನ್ನು ಧರಿಸುವುದು. ಡ್ರೆಸ್ ಲೂಸ್ ಆಗಿದ್ದರೆ ಎಷ್ಟೇ ಮಾಡರ್ನ್ ಆಗಿದ್ದರೂ ಲುಕ್ ಹಾಳಾಗುತ್ತದೆ.
ಹೊಸ ಶೈಲಿಯ ಬಟ್ಟೆಗಳ ಟ್ರೆಂಡ್
ಕೆಲವು ಜನರು ಟ್ರೆಂಡ್ ಫಾಲೋ ಮಾಡಲು ಬಯಸುತ್ತಾರೆ. ಆ ಬಟ್ಟೆಗಳು ಸುಂದರವಾಗಿದ್ದರೂ, ನಿಮಗೆ ಸೂಟ್ ಆಗುವುದಿಲ್ಲ. ನೀವು ಧರಿಸಿರುವ ಬಟ್ಟೆ ಆರಾಮದಾಯಕವಾಗಿರಬೇಕು. ಫ್ಯಾಷನ್ ಸ್ಫೂರ್ತಿ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲವಾದರೂ, ನೀವು ನಿಮ್ಮ ಸ್ವಂತ ಶೈಲಿಯನ್ನು ಹೊಂದಿರಬೇಕು.
ಟ್ರೆಡಿಷನಲ್ ಬಟ್ಟೆ ಜೊತೆ ಚಪ್ಪಲಿ
ನೀವು ಟ್ರೆಡಿಷನಲ್ ಬಟ್ಟೆಗಳನ್ನು ಆರಿಸುವಾಗ, ನೀವು ಅವುಗಳನ್ನು ಧರಿಸಿರುವ ಸಂದರ್ಭವನ್ನು ಪರಿಗಣಿಸಬೇಕು. ನಿಮ್ಮ ಬಟ್ಟೆ ಎಂದರೆ ಕೇವಲ ಬಟ್ಟೆಯ ಅರ್ಥವಲ್ಲ ಆದರೆ ನಿಮ್ಮ ತಲೆಯಿಂದ ಹಿಡಿದು ಪಾದದವರೆಗೆ ನೀವು ಹಾಕುವ ಎಲ್ಲವನ್ನೂ ಗಮನಿಸಬೇಕು. ಬಟ್ಟೆಗೆ ಸರಿಯಾದ ಚಪ್ಪಲಿ, ಹೀಲ್ಸ್ ಧರಿಸಬೇಕು.