ಭಾರತದಿಂದ ಮೆಡಿಸಿನ್ಸ್‌ ಹೋಗ್ತಿಲ್ಲ, ಕೆಲಸ ಬಿಡೋಕೆ ಮುಂದಾದ ವೈದ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ, ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ. ಇದರಿಂದ ಪಾಕಿಸ್ತಾನ ಅಗತ್ಯ ಔಷಧಗಳ ಕೊರತೆ ಎದುರಿಸುತ್ತಿದೆ.

ಪಾಕಿಸ್ತಾನದ ವೈದ್ಯರೇ ಕೆಲಸ ಬಿಟ್ಟು ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತದ ಜೆನೆರಿಕ್ ಮೆಡಿಸಿನ್ ಮೇಲೆ ಪಾಕಿಸ್ತಾನ ಅವಲಂಬಿತವಾಗಿತ್ತು. ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಅನೇಕ ಮಾತ್ರೆಗಳ ತಯಾರಿಸಲು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ.

ಅಲ್ಲಿನ ಜನ ಹಾವು ಕಡಿತಕ್ಕೆ, ಕ್ಯಾನ್ಸರ್‌ಗೆ ಔಷಧವಿಲ್ಲದೇ ಪರದಾಡುತ್ತಿದ್ದಾರೆ. ವಿಟಮಿನ್-ಡಿ, ವಿಟಮಿನ್ ಬಿ1, ವಿಟಮಿನ್ ಬಿ12, ಮಕ್ಕಳಿಗೆ ಮಾಲ್ ನ್ಯೂಟ್ರೀಷನ್ಸ್ ಎಲ್ಲವೂ ಬಂದ್ ಆಗಿವೆ. ಬೇಸಿಕ್ ಮೆಡಿಸಿನ್ ಇಲ್ಲದೆ ಪಾಕಿಸ್ತಾನ ಪರದಾಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!