ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿಗೆ ಗಡಿಪಾರಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್‌ ದಾಳಿ ಬಳಿಕ ಪಾಕಿಸ್ತಾನದ ವೀಸಾ ಸ್ಥಗಿತಗೊಳಿಸಿರುವ ಕಾರಣ ಭಾರತದಲ್ಲಿದ್ದ ಪಾಕಿಸ್ತಾನೀಯರು ತಮ್ಮ ದೇಶಕ್ಕೆ ವಾಪಸ್‌ ಆಗುತ್ತಿದ್ದಾರೆ. ಇನ್ನೂ ಪಾಕ್‌ಗೆ ಗಡೀಪಾರಾಗುವ ಭೀತಿ ಎದುರಿಸಿದ್ದ ಕಾಶ್ಮೀರದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಪೇದೆಯ ತಾಯಿಯನ್ನು ಈ ಕ್ರಮದಿಂದ ಕೈಬಿಡಲಾಗಿದೆ.

ಕೇಂದ್ರದ ಆದೇಶದಿಂದ ಮರಣೋತ್ತರ ಶೌರ್ಯ ಪ್ರಶಸ್ತಿ ಪಡೆದಿದ್ದ ಪೊಲೀಸ್ ಪೇದೆ ಮುದಾಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್‌ ಅವರು ಗಡೀಪಾರು ಕ್ರಮಕ್ಕೆ ಒಳಗಾಗಿದ್ದರು. ಈಗ ಸರ್ಕಾರ ಅವರಿಗೆ ಭಾರತದಲ್ಲಿಯೇ ಇರಲು ಅನುಮತಿ ನೀಡಿದೆ. ಇದರಿಂದ ಶಮೀಮಾ ಮನೆಗೆ ಮರಳಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಭುಗಿಲೇಳುವುದಕ್ಕೂ ಮುನ್ನವೇ ಶಮೀಮಾ ಕಾಶ್ಮೀರದ ವ್ಯಕ್ತಿಯನ್ನು ಮದುವೆಯಾಗಿದ್ದರು.

2022ರ ಮೇನಲ್ಲಿ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪೊಲೀಸ್‌ ಪೇದೆಯಾಗಿದ್ದ ಶಮೀಮಾ ಅವರ ಮಗ ಮುದಾಸಿರ್ ಸಾವನ್ನಪ್ಪಿದ್ದರು. ಮಗನ ಶೌರ್ಯ‌ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶಮೀಮಾ ಅವರು ಸ್ವೀಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!