ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಷಯ ತೃತೀಯ ಹಬ್ಬದಂದು ವಿಶ್ವವಿಖ್ಯಾತ ಗಂಗೋತ್ರಿ ಧಾಮದ ಬಾಗಿಲುಗಳನ್ನು ಭಕ್ತರಿಗಾಗಿ ತೆರೆಯಲಾಗಿದ್ದು, ಸಾವಿರಾರು ಭಕ್ತರ ದೇವರ ದರುಶನ ಪಡೆದಿದ್ದಾರೆ.
ಆರು ತಿಂಗಳ ಕಾಲ ನಿರಂತರವಾಗಿ ಗಂಗಾ ಮಾತೆಯ ದರ್ಶನ ಪಡೆಯಲು ಗಂಗೋತ್ರಿ ಧಾಮಕ್ಕೆ ಭೇಟಿ ನೀಡಬಹುದಾಗಿದೆ. ಬುಧವಾರ ಬೆಳಗ್ಗೆ 10:30 ಕ್ಕೆ ಅಭಿಜಿತ್ ಮುಹೂರ್ತದಂದು ಭಕ್ತರಿಗಾಗಿ ಗಂಗೋತ್ರಿ ಧಾಮದ ಬಾಗಿಲು ತೆರೆಯಲಾಯಿತು. ಧಾಮದಲ್ಲಿ ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮೊದಲ ಪೂಜೆಯನ್ನು ನೆರವೇರಿಸಲಾಯಿತು.
ಬಾಗಿಲು ತೆರೆದ ಸಂದರ್ಭದಲ್ಲಿ ಇಡೀ ಗಂಗೋತ್ರಿ ಧಾಮವು ಗಂಗಾ ಮಾತೆಯ ಘೋಷಣೆಗಳಿಂದ ಪ್ರತಿಧ್ವನಿಸಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಗಂಗೋತ್ರಿ ಧಾಮಕ್ಕೆ ಆಗಮಿಸಿ ಗಂಗಾಮಾತೆಯ ದರ್ಶನ ಪಡೆದರು. ಯಮುನೋತ್ರಿ ಮತ್ತು ಗಂಗೋತ್ರಿ ಧಾಮದ ಬಾಗಿಲು ತೆರೆಯುವುದರೊಂದಿಗೆ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಪ್ರಾರಂಭವಾಗಿದೆ.