ಪ್ರತಿಯೊಬ್ಬರ ಮುಖದ ಆಕಾರ ವಿಭಿನ್ನವಾಗಿರುತ್ತದೆ. ಇದಕ್ಕೆ ತಕ್ಕಂತೆ ಸರಿಯಾದ ಕಟ್ ಅನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಅದಕ್ಕಾಗಿಯೇ ನಾವು ಇವತ್ತು ಯಾವ ರೀತಿಯ ಮುಖದ ಆಕಾರಕ್ಕೆ ಯಾವರೀತಿಯ ಹೇರ್ ಕಟ್ ಒಪ್ಪುತ್ತದೆ ಎಂದು ತಿಳಿದುಕೊಳ್ಳೋಣ.
ಅಂಡಾಕಾರದ ಮುಖದ ಆಕಾರ:
ನೀವು ಅಂಡಾಕಾರದ ಮುಖವನ್ನು ಹೊಂದಿದ್ದರೆ, ಅದರಲ್ಲಿ ನಿಮ್ಮ ಹಣೆ, ಕೆನ್ನೆಯ ಮೂಳೆಗಳು ಮತ್ತು ದವಡೆ ಎಲ್ಲವೂ ಸಮತೋಲನದಲ್ಲಿದ್ದರೆ, ನಿಮಗೆ ಪ್ರತಿಯೊಂದು ಹೇರ್ ಕಟ್ ಒಪ್ಪುತ್ತದೆ.
ದುಂಡಗಿನ ಮುಖದ ಆಕಾರ: ಟೆಕ್ಸ್ಚರ್ಡ್ ಪಿಕ್ಸೀ
ದುಂಡಗಿನ ಮುಖ ಹೊಂದಿರುವವರಿಗೆ, ಅಂದರೆ ಮೃದು ಕೋನಗಳೊಂದಿಗೆ ಅಗಲ ಮತ್ತು ಉದ್ದದಲ್ಲಿ ಬಹುತೇಕ ಸಮಾನವಾಗಿರುವವರಿಗೆ, ಎತ್ತರ ಮತ್ತು ಉದ್ದವನ್ನು ಸೃಷ್ಟಿಸುವುದು ಮುಖ್ಯ. ವೃತ್ತಾಕಾರದ ಆಕಾರಕ್ಕಾಗಿ ಟೆಕ್ಸ್ಚರ್ಡ್ ಪಿಕ್ಸೀ ಶೈಲಿಯ ಹೇರ್ ಕಟ್ ಉತ್ತಮ.
ಚೌಕಾಕಾರದ ಮುಖ: ಭುಜದ ಉದ್ದದ ಶಾಗ್
ಪ್ರಮುಖವಾದ ಚೌಕಾಕಾರದ ಮುಖದ ಆಕಾರಗಳಿಗೆ ಬಂದಾಗ ಸಾಕಷ್ಟು ಪದರಗಳನ್ನು ಹೊಂದಿರುವ ಭುಜದವರೆಗಿನ ಉದ್ದದ ಶಾಗ್ ಉತ್ತಮ ಆಯ್ಕೆ. ಶಾಗ್ನ ಓಪನ್ ಸ್ಟೈಲ್ ನಿಮ್ಮ ಮುಖವು ಚೌಕಾಕಾರವಾಗಿ ಕಾಣುವುದನ್ನು ತಡೆಯುತ್ತದೆ. ಹೆಚ್ಚು ಸಮತೋಲಿತ, ಮೃದುವಾದ ನೋಟವನ್ನು ಸೃಷ್ಟಿಸುತ್ತದೆ.
ಉದ್ದನೆಯ ಮುಖದ ಆಕಾರ: ದಿ ಬ್ಲಂಟ್ ಬ್ಯಾಂಗ್ಸ್ ಬಾಬ್
ಉದ್ದನೆಯ ಮುಖದ ಆಕಾರ ಹೊಂದಿರುವವರಿಗೆ ಬ್ಲಂಟ್ ಬ್ಯಾಂಗ್ಗಳೊಂದಿಗೆ ಕಾಲರ್ ಬೋನ್-ಉದ್ದದ ಬಾಬ್ ಉತ್ತಮ ಆಯ್ಕೆ.
ಹೃದಯಾಕಾರ ಮುಖ: ಗಲ್ಲದ ಉದ್ದದ ಬಾಬ್
ಹೃದಯಾಕಾರದ ಮುಖ ಹೊಂದಿರುವವರಿಗೆ, ಅಗಲವಾದ ಹಣೆ, ಎತ್ತರದ ಕೆನ್ನೆಯ ಮೂಳೆಗಳು ಮತ್ತು ಮೊನಚಾದ ಗಲ್ಲವನ್ನು ಹೊಂದಿರುವವರಿಗೆ ಮುಖದ ಕೆಳಗಿನ ಅರ್ಧಕ್ಕೆ ಸರಿ ಹೊಂದುವಂತೆ ಗಲ್ಲದ ಉದ್ದದ ಬಾಬ್ ಕಟ್ ಅನ್ನು ಪ್ರಯತ್ನಿಸಬಹುದು.