ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಇಂದು ಪ್ರಧಾನಿ ಮೋದಿ ನನ್ನ ಜೊತೆ ವೇದಿಕೆ ಮೇಲೆ ಸಿಎಂ ಪಿಣರಾಯಿ ವಿಜಯನ್ ಶಶಿ ತರೂರ್ ಕುಳಿತಿರುವುದು ಹಲವರಿಗೆ ನಿದ್ದೆಗೆಡಿಸಲಿದೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ.
ವಿಳಿಂಜಂ ಅಂತಾರಾಷ್ಟ್ರೀಯ ಬಂದರನ್ನು ಉದ್ಘಾಟಿಸಿದ ನರೇಂದ್ರ ಮೋದಿ ಮಾತನಾಡುತ್ತಾ , ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಾನು ಹೇಳಲು ಬಯಸುತ್ತೇನೆ. ನೀವು INDIA ಒಕ್ಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕರ ನಿದ್ರೆಯನ್ನು ಕೆಡಿಸಲಿದೆ ಎಂದರು.
ಈ ಮೊದಲು ಮೋದಿ ಅವರು ತಿರುವನಂತಪುರಂಗೆ ಭೇಟಿ ನೀಡಿದಾಗ ಶಶಿ ತರೂರ್ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿದ್ದರು. ವೇದಿಕೆಯಲ್ಲಿ ಶಶಿ ತರೂರ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಸಂವಾದವೂ ಗಮನ ಸೆಳೆದಿದೆ. ತರ ಗಣ್ಯರೊಂದಿಗೆ ಸಂಕ್ಷಿಪ್ತ ಶುಭಾಶಯ ಹೇಳಿದರೆ ಮೋದಿ ತರೂರ್ ಅವರ ಕೈ ಕುಲುಕಿ ಕೆಲ ಸೆಕೆಂಡ್ ಮಾತನಾಡಿದ್ದು ವಿಶೇಷವಾಗಿತ್ತು.