ಹೊಸದಿಗಂತ ಡಿಜಿಟಲ್ ಡೆಸ್ಕ್:
‘‘ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ನಮಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ. ಯುದ್ಧ ಮಾಡಬೇಕಾಗಿ ಬಂದರೆ ನಾನೂ ಸಿದ್ಧ. ಈ ದೇಶಕ್ಕೋಸ್ಕರ ಅಗತ್ಯಬಿದ್ದರೆ ಯುದ್ಧ ಮಾಡ್ತಿನಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗುತ್ತೇನೆ. ಇದು ಅಲ್ಲಾ ಮೇಲೆ, ದೇವರ ಮೇಲೆ ಆಣೆ ಎಂದು ಜಮೀರ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.