ಏನಾದ್ರು ತಪ್ಪಾದಾಗ, sorry ಹೇಳೋ ಅಭ್ಯಾಸ ಎಲ್ಲರಿಗೂ ಇದೆ. ಆದರೆ ಹೆಚ್ಚು SORRY ಎಂದು ಹೇಳುವುದು ನಿಮ್ಮ ಮಾನಸಿಕ ದೌರ್ಬಲ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.
SORRY ಎಂದು ಹೇಳುವುದು ನನ್ನನ್ನು ಕ್ಷಮಿಸಿ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ SORRY ನಿಜವಾಗಿ ಎಲ್ಲಿಂದ ಬಂತು ಎಂದು ನಮಗೆ ತಿಳಿದಿದೆಯೇ? ಇದರ ಇತಿಹಾಸ ನಿಮಗೆ ಗೊತ್ತಿದೆಯಾ? ಇಲ್ಲಿ ಕೇಳಿ.
‘sorry’ ಎಂಬ ಪದವು ‘sarig’ ಅಥವಾ ‘sorrow’ ಎಂಬ ಇಂಗ್ಲಿಷ್ ಪದದಿಂದ ಬಂದಿದೆ, ಇದರರ್ಥ ‘ಕೋಪ ಅಥವಾ ಅಸಮಾಧಾನ’. ಈ ರೀತಿಯ ಪದಗಳು ಪ್ರಾಚೀನ ಜರ್ಮನ್ ಭಾಷೆಯ ಸೈರಾಗ್ ಮತ್ತು ಆಧುನಿಕ ಜರ್ಮನ್ ಭಾಷೆಯ ಸೈರಾಗಜ್, ಇಂಡೋ ಯುರೋಪಿಯನ್ ಭಾಷೆಯ ಸಾಯಿವ್ ಮುಂತಾದ ಹಲವು ಭಾಷೆಗಳಲ್ಲಿ ಕಂಡುಬರುತ್ತವೆ.
SORRY ಯ ಪೂರ್ಣ ರೂಪವು ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲಗಳಲ್ಲಿ ಅನೇಕ ಕಡೆ ಕಂಡುಬರುತ್ತದೆ. ಅದರಲ್ಲಿ ಅಕ್ಷರಗಳ ಪ್ರಕಾರ ಅರ್ಥೈಸಲಾಗುತ್ತದೆ. ಇದರ ಪ್ರಕಾರ – SORRY ಎಂದರೆ Someone Is Really Remembering You – ಯಾರೋ ನಿಜವಾಗಿಯೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅಂತ. ಆದರೆ ಯಾವುದೇ ಭಾಷಾಶಾಸ್ತ್ರಜ್ಞರು ಇದನ್ನು ಖಚಿತಪಡಿಸಿಲ್ಲ. ಕೆಲವರು sorry ಯನ್ನು ಕ್ಷಮಿಸಿ ಎನ್ನುವ ಭಾವನೆಯಲ್ಲಿ ಹೇಳಿದರೆ ಇನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ ಎನ್ನುವ ಭಾವನೆಯಲ್ಲಿಯೂ ಹೇಳುತ್ತಾರೆ.