ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತ ಹೇಳುತ್ತಾರೆ. ಗಂಡ-ಹೆಂಡತಿ ಪರಸ್ಪರ ನಂಬಿಕೆ, ಹೊಂದಾಣಿಕೆ ಮತ್ತು ತಾಳ್ಮೆ ತುಂಬಾನೇ ಮುಖ್ಯವಾಗಿ ಬೇಕಾಗಿರುತ್ತವೆ. ಸಣ್ಣ ತಪ್ಪುಗಳು ದೀರ್ಘಾವಧಿಯಲ್ಲಿ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಇವತ್ತು ಆರೋಗ್ಯಕರ ವೈವಾಹಿಕ ಜೀವನ ಹೊಂದಲು ಕೆಲವು ಸಲಹೆಗಳನ್ನು ನಿಮಗೆ ಕೊಡುತ್ತೇವೆ.
ಕ್ಷಮಿಸುವುದನ್ನು ರೂಢಿಸಿಕೊಳ್ಳಿ
ವೈವಾಹಿಕ ಜೀವನ ಚೆನ್ನಾಗಿರಬೇಕು ಎಂದರೆ ತಪ್ಪು ನಡೆದಾಗ ಕ್ಷಮೆ ಕೇಳಿ ಮುಂದೆ ಸಾಗುವುದು ಒಳ್ಳೆಯದು. ನೀವು ತಪ್ಪು ಮಾಡಿದಾಗ, ತ್ವರಿತವಾಗಿ ಕ್ಷಮೆಯಾಚಿಸಿ ಮತ್ತು ಸಮಸ್ಯೆಯನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ.
ಖಾಸಗಿ ಸಮಯ
ಪ್ರತಿಯೊಬ್ಬರಿಗೂ ವಿಶ್ರಾಂತಿ, ವೈಯಕ್ತಿಕ ಆಸಕ್ತಿಗಳನ್ನು ಅನುಸರಿಸಲು ತಮ್ಮದೇ ಆದ ಖಾಸಗಿ ಸಮಯ ಬೇಕಾಗುತ್ತದೆ. ಸ್ನೇಹಿತರೊಂದಿಗೆ ಹೊರಗೆ ಹೋಗಿ, ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ ಮತ್ತು ನಿಮ್ಮ ನೆಚ್ಚಿನ ಕೆಲಸವನ್ನು ಮಾಡಿ.
ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಿ
ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಭಿನ್ನಾಭಿಪ್ರಾಯವನ್ನು ಹೊಂದಿರುತ್ತಾರೆ. ನಿಮ್ಮ ಭಿಪ್ರಾಯಗಳನ್ನು ಒಪ್ಪದಿದ್ದಾಗ ನ್ಯಾಯಯುತ ಮತ್ತು ಗೌರವಾನ್ವಿತವಾಗಿರುವುದು ಬಹಳ ಮುಖ್ಯವಾಗುತ್ತದೆ.