DO YOU KNOW | ವಿಮಾನದಲ್ಲಿ ಸಿಗುವ ಆಹಾರದ ರುಚಿ ನಮ್ಮ ನಾಲಗೆಗೆ ಹಿಡಿಸಲ್ಲ ಯಾಕೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ!

ರೈಲು, ಕಾರು ಮತ್ತು ಬಸ್ ನಲ್ಲಿ ಪ್ರಯಾಣಿಸುವಾಗ ನಾವು ನಮಗೆ ಬೇಕಾದ ಆಹಾರಗಳನ್ನು ಮನೆಯಲ್ಲಿ ತಯಾರಿಸಿ ತೆಗೆದುಕೊಂಡು ಹೋಗಬಹುದು. ಆದರೆ ಕೆಲವೊಂದು ವಿಮಾನಗಳಲ್ಲಿ ಇಂತಹದಕ್ಕೆ ನಿರ್ಬಂಧಗಳಿರುತ್ತವೆ ಆಗ ವಿಮಾನದಲ್ಲಿ ಲಭ್ಯವಿರುವ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ.

ಹೆಚ್ಚಿನವರು ವಿಮಾನದಲ್ಲಿ ಸಿಗುವ ಆಹಾರ ರುಚಿಕರವಾಗಿಲ್ಲ ಎಂದು ದೂರುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ಉತ್ತರ.

ಗಾಳಿಯಲ್ಲಿ ಎತ್ತರಕ್ಕೆ ತಲುಪಿದ ನಂತರ ನಮ್ಮ ನಾಲಿಗೆಯ ರುಚಿ ಮೊಗ್ಗುಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ನಾವು ಉತ್ತಮ ಮತ್ತು ರುಚಿಕರವಾದ ಆಹಾರವನ್ನು ಆಸ್ವಾದಿಸುವ ಸಾಮರ್ಥ್ಯವನ್ನು ಕೊಂಚ ಮಟ್ಟಿಗೆ ಕಳೆದುಕೊಳ್ಳುತ್ತೇವೆ.

ಇನ್ನೊಂದು ಅಧ್ಯಯನದ ಪ್ರಕಾರ ವಿಮಾನದಲ್ಲಿ ಕಡಿಮೆ ಗಾಳಿಯ ಒತ್ತಡವಿರುತ್ತದೆ. ಇದು ನಮ್ಮ ವಾಸನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ತೇವಾಂಶವಿಲ್ಲದೆ ನಾವು ವಾಸನೆ ಗ್ರಹಿಸಲು ಸಾಧ್ಯವಿಲ್ಲ. ವಾಸನೆ ಮತ್ತು ರುಚಿ ಪರಸ್ಪರ ಸಂಬಂಧ ಹೊಂದಿರುವುದರಿಂದ, ನಾವು ವಿಮಾನದಲ್ಲಿ ಸೇವಿಸುತ್ತಿರುವ ಆಹಾರವು ರುಚಿಯಾಗಿಲ್ಲ ಎನಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!