ಮತ್ತೆ ಎಡವಿದ ರಾಜಸ್ಥಾನ: 1 ರನ್‌ ಗೆ ಗೆದ್ದು ಸಂಭ್ರಮಿಸಿದ ಕೊಲ್ಕತ್ತಾ ನೈಟ್ ರೈಡರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 1 ರನ್‌ ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 207 ರನ್‌ಗಳ ಬೃಹತ್ ಟಾರ್ಗೆಟ್‌ ನೀಡಿತ್ತು. ಇದಕ್ಕೆ ಉತ್ತರವಾಗಿ ನಾಯಕ ರಿಯಾನ್ ಪರಾಗ್ ಅವರ ಅಮೋಘ ಬ್ಯಾಟಿಂಗ್ ನರವಿನಿಂದ 205 ರನ್ ಗಳಿಸಲಷ್ಟೇ ಶಕ್ತವಾಯಿತು.

207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊದಲ 8 ಓವರ್‌ಗಳಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದ್ದ ತಂಡಕ್ಕೆ ಆಸರೆಯಾಗಿದ್ದು, ಸ್ಪೋಟಕ ಬ್ಯಾಟರ್ ಹೇಟ್‌ಮಯರ್ ಹಾಗೂ ನಾಯಕ ರಿಯಾನ್ ಪರಾಗ್ ಈ ಇಬ್ಬರೂ 7ನೇ ವಿಕೆಟ್‌ಗೆ 92 ರನ್ ಗಳ ಜೊತೆಯಾಟ ಆಡಿದರು.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸಹಿತ 95 ರನ್ ಗಳಿಸಿ ಔಟ್ ಆದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 22 ರನ್ ಅಗತ್ಯವಿದ್ದಾಗ ಅಮೋಘ ಬ್ಯಾಟಿಂಗ್ ಆಡಿದ ಶುಭಂ ದುಬೆ 21 ರನ್ ಗಳಿಸಿದರು. ಆ ಮೂಲಕ ಅಂತಿಮ ಎಸೆತದಲ್ಲಿ ತಂಡದ ಗೆಲುವಿಗೆ ಗೆಲ್ಲಲು ಮೂರು ರನ್ ಅಗತ್ಯವಿದ್ದಾಗ 1 ರನ್ ಮಾತ್ರ ಗಳಿಸಲು ಶಕ್ತವಾದರು. ಆ ಮೂಲಕ ರಾಜಸ್ಥಾನ ರಾಯಲ್ಸ್ 1 ರನ್‌ಗಳ ರೋಚಕ ಸೋಲು ಅನುಭವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!