ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಕ್ಯಾಪ್ಸಿಕಂ
ಉಪ್ಪು
ಖಾರದಪುಡಿ
ಹಸಿಮೆಣಸು
ಸಾಂಬಾರ್ ಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಜೀರಿಗೆ ಹಾಕಿ
ನಂತರ ಅದಕ್ಕೆ ಹಸಿಮೆಣಸು ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಇದಕ್ಕೆ ಟೊಮ್ಯಾಟೊ, ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ ಹಾಕಿ
ನಂತರ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ
ನಂತರ ಇದಕ್ಕೆ ನೀರು ಹಾಕಿ ಕುದಿಸಿ
ಆಮೇಲೆ ಬೇಯಿಸಿದ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ
ನಂತರ ಒಂದು ಸಣ್ಣ ಲೋಟಕ್ಕೆ ಒಂದು ಸ್ಪೂನ್ ಕಡ್ಲೆಹಿಟ್ಟು ಹಾಗೂ ನೀರು ಹಾಕಿ ಮಿಕ್ಸ್ ಮಾಡಿದ ಮಿಶ್ರಣವನ್ನು ಹಾಕಿದ್ರೆ ಪಲ್ಯ ರೆಡಿ