ಹಸಿವಿನ ಭಾವನೆ ದೇಹದ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಕೆಲವರಿಗೆ ಪದೇ ಪದೇ ಹಸಿವಾಗುತ್ತದೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
ಸಾಮಾನ್ಯ ಊಟದ ನಂತರವೂ ನಿಮ್ಮ ಹೊಟ್ಟೆ ಖಾಲಿಯಾಗಿದೆ ಎಂಬ ಭಾವನೆ ಉಂಟಾಗುತ್ತಿದದ್ದರೆ ಅಥವಾ ನಿಮಗೆ ಮತ್ತೆ ತಿನ್ನಬೇಕು ಎಂದು ಅನ್ನಿಸುತ್ತಿದಿಯಾ? ಹಾಗಾದ್ರೆ ಈ ಅತಿಯಾದ ಹಸಿವು ಮಧುಮೇಹದ ಪ್ರಮುಖ ಲಕ್ಷಣವಾಗಿರಬಹುದು ಅಥವಾ ಹಾರ್ಮೋನುಗಳ ಅಸಮತೋಲನ ಅಥವಾ ಹೈಪರ್ ಥೈರಾಯ್ಡಿಸಮ್, ಮಾನಸಿಕ ಪರಿಸ್ಥಿತಿಗಳು, ಪೌಷ್ಟಿಕಾಂಶದ ಕೊರತೆಗಳಂತಹ ಹಲವು ಕಾರಣಗಳು ಇರಬಹುದು.
ಇದರ ಜೊತೆಗೆ ದೇಹ ಸಾಕಷ್ಟು ಫೈಬರ್, ಪ್ರೋಟೀನ್ ಅಥವಾ ಇತರ ಪೋಷಕಾಂಶಗಳನ್ನು ಪಡೆಯದಿದ್ದರೂ ಸಹ ಅತಿಯಾದ ಹಸಿವಿನ ಸಮಸ್ಯೆಯೂ ಉಂಟಾಗಬಹುದು.
ಪರಿಹಾರ ಏನು? ಪದೇ ಪದೇ ಹಸಿವಾಗುತ್ತಿದ್ದರೆ ತನ್ನ ಆಹಾರ ಪದ್ದತಿಯನ್ನು ಬದಲಾಯಿಸಬೇಕು ಲಘು ಆಹಾರ ಸೇವಿಸುವುದು ಉತ್ತಮ. ಇದರಲ್ಲಿ ಫೈಬರ್ನಲ್ಲಿ ಅಧಿಕವಾಗಿರಬೇಕು. ಪ್ರೋಟೀನ್ ಹೊಂದಿರುವ ಉಪಾಹಾರವನ್ನ ಸೇವಿಸಬೇಕು. ಯಾವುದೇ ಆಹಾರವನ್ನು ತೆಗೆದುಕೊಳ್ಳುವಾಗ ಆಹಾರವನ್ನು ಚೆನ್ನಾಗಿ ಅಗಿಯಬೇಕು.ಇದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.