WOMEN | ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಯಾಕೆ ಬರುತ್ತೆ? ಕಾರಣ ಇಲ್ಲಿದೆ!

ಮುಟ್ಟು ಅಥವಾ ಋತುಚಕ್ರವು ಮಹಿಳೆಯ ಜೀವನ ಚಕ್ರದ ಭಾಗವಾಗಿದೆ. ಈ ಸಮಯದಲ್ಲಿ ಪ್ರತಿ ಮಹಿಳೆಯ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅನೇಕ ಮಹಿಳೆಯರಿಗೆ ನೋವಿನಿಂದ ಕೂಡಿದ ಮುಟ್ಟು ಇರುತ್ತವೆ. ಕೆಲವೊಮ್ಮೆ ಕೆಳ ಬೆನ್ನು ನೋವು, ವಾಕರಿಕೆ, ಅತಿಸಾರ ಮತ್ತು ತಲೆನೋವುಗಳಂತಹ ಇತರ ಲಕ್ಷಣಗಳನ್ನು ಸಹ ಕಂಡುಬರುತ್ತದೆ.

ಆದರೆ ನಿಮಗೆ ಗೊತ್ತಾ ಋತುಚಕ್ರದ ಸಮಯದಲ್ಲಿ ಹೆಚ್ಚಿನ ಮಹಿಳೆಯರು ತೀವ್ರವಾದ ಹೊಟ್ಟೆನೋವು ಅನುಭವಿಸುತ್ತಾರೆ ಯಾಕೆ? ಅದಕ್ಕೆ ಇಲ್ಲಿದೆ ಉತ್ತರ.

ಮುಟ್ಟಾದಾಗ ಗರ್ಭಾಶಯದ ಒಳಪದರವು ಸಂಕುಚಿತಗೊಳ್ಳುವುದರಿಂದ ಈ ಸೆಳೆತಗಳು ಉಂಟಾಗುತ್ತವೆ. ಇವುಗಳು ತೀವ್ರವಾದ ನೋವನ್ನು ಉಂಟಾಗಬಹುದು. ಸಾಮಾನ್ಯವಾಗಿ ಈ ನೋವನ್ನು ಡಿಸ್ಮೆನೊರಿಯಾ ಎಂದು ಕರೆಯುತ್ತಾರೆ. ಈ ನೋವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿದಂತೆ ಭಾಸವಾಗುತ್ತದೆ. ನೋವು ಅಲ್ಲಿಂದ ಬೆನ್ನು, ತೊಡೆಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳಿಗೆ ಹರಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!